ಅಖಿಲ ಭಾರತ ತುಳು ಒಕ್ಕೂಟದ ಸದಸ್ಯತ್ವಕ್ಕೆ ಅರ್ಜಿ ಆಹ್ವಾನ
ಮಂಗಳೂರು, ಆ.29: ಮೂರು ದಶಕಗಳಿಂದ ವಿಶ್ವ ಮಟ್ಟದ ವಿವಿಧ ಸ್ವರೂಪಗಳ ತುಳು ಪರ್ಬಗಳನ್ನು ಸಂಘಟಿಸುವ ಮೂಲಕ ಗಮನ ಸೆಳೆದಿರುವ ಮಂಗಳೂರಿನ ಅಖಿಲ ಭಾರತ ತುಳು ಒಕ್ಕೂಟ (ರಿ)ದಲ್ಲಿ 52 ತುಳು ಸಂಘಟನೆಗಳು ಕಾರ್ಯಾಚರಿಸುತ್ತಿವೆ. ಧರ್ಮಪಾಲ ಯು.ದೇವಾಡಿಗ ಅವರ ಅಧ್ಯಕ್ಷತೆಯಲ್ಲಿರುವ ಈ ಸಂಘಟನೆಯು ಜಾಗತಿಕ ಮಟ್ಟದಲ್ಲಿ ಗುರುತಿಸಲ್ಪಟ್ಟಿದೆ. ದೇಶದ ವಿವಿಧ ರಾಜ್ಯ, ಜಿಲ್ಲೆ, ನಗರ ಪ್ರದೇಶಗಳಲ್ಲಿರುವ ತುಳು ಸಂಘ ಸಂಸ್ಥೆಗಳು ಅಖಿಲ ಭಾರತ ತುಳು ಒಕ್ಕೂಟದ ಸದಸ್ಯತ್ವ ಪಡೆಯಲು ಅರ್ಜಿ ಸಲ್ಲಿಸಬಹುದು.
ಈಗಾಗಲೇ ಸದಸ್ಯರಾಗಿರುವ ಒಕ್ಕೂಟದ ಎಲ್ಲಾ ಸಂಸ್ಥೆಗಳು ತಮ್ಮ ಸದಸ್ಯತ್ವವನ್ನು ಒಕ್ಕೂಟದ ವಿಳಾಸಕ್ಕೆ ಪತ್ರ ಬರೆದು ದೃಢೀಕರಿಸಬೇಕು. ಒಕ್ಕೂಟದಲ್ಲಿ ಪ್ರತಿನಿಧಿಸಲ್ಪಡುವ ಸಂಸ್ಥೆಯ ಮೂವರು ಪ್ರತಿನಿಧಿಗಳ ಹೆಸರು,ವಿಳಾಸ ,ಮೊಬೈಲ್ ಸಂಖ್ಯೆ ಹಾಗೂ ಭಾವಚಿತ್ರವನ್ನು ಸೆಪ್ಟೆಂಬರ್ 30ರೊಳಗೆ ‘ಅಖಿಲ ಭಾರತ ತುಳು ಒಕ್ಕೂಟ,ಮುಗ್ರೋಡಿ ಎನ್ ಕ್ಲೇವ್, ಗಾಂಧೀನಗರ ಕಾವೂರು, ಮಂಗಳೂರು ಈ ವಿಳಾಸಕ್ಕೆ ಕಳುಹಿಸಿಕೊಡಬೇಕು.
ಒಕ್ಕೂಟದ ಸದಸ್ಯತ್ವ ಪಡೆದಿರುವ ತುಳು ಸಂಘಟನೆಗಳು ತಮ್ಮ ಕಾರ್ಯಕ್ರಮಗಳ ಭಾವಚಿತ್ರ, ವೀಡಿಯೋ ವಿವರದೊಂದಿಗೆ ಒಕ್ಕೂಟಕ್ಕೆ ಕಳುಹಿಸಿಕೊಟ್ಟಲ್ಲಿ ವಿಜೇತರಿಗೆ ಅತ್ಯುತ್ತಮ ಸಾಧನಾ ಪ್ರಶಸ್ತಿ 2020-21ನ್ನು ವಾರ್ಷಿಕ ಕಾರ್ಯಕ್ರಮದಲ್ಲಿ ನೀಡಲಾಗುವುದು ಎಂದು ಪ್ರಕಟನೆ ತಿಳಿಸಿದೆ.





