ಕೋವಿಡ್-19 ಹಿನ್ನೆಲೆ ಭಾರತದಲ್ಲಿ ಅಂತರರಾಷ್ಟ್ರೀಯ ಪ್ರಯಾಣಿಕ ವಿಮಾನಯಾನಗಳು ಸೆ.30ರವರೆಗೆ ರದ್ದು

ಹೊಸದಿಲ್ಲಿ, ಆ.29: ಕೋವಿಡ್ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ನಾಗರಿಕ ವಾಯುಯಾನ ಮಹಾ ನಿರ್ದೇಶನಾಲಯ (ಡಿಜಿಸಿಎ)ವು ಅಂತರರಾಷ್ಟ್ರೀಯ ಪ್ರಯಾಣಿಕ ವಿಮಾನಯಾನಗಳ ರದ್ದತಿಯನ್ನು 2021,ಸೆ.30ರವರೆಗೆ ವಿಸ್ತರಿಸಿ ರವಿವಾರ ಆದೇಶಿಸಿದೆ.
ಆದರೆ ವಿಶೇಷ ಸಂದರ್ಭಗಳನ್ನು ಪರಿಗಣಿಸಿ ಆಯ್ದ ಮಾರ್ಗಗಳಲ್ಲಿ ನಿಗದಿತ ಅಂತರರಾಷ್ಟ್ರೀಯ ವಿಮಾನಯಾನಗಳಿಗೆ ಅವಕಾಶವನ್ನು ನೀಡಲಾಗುವುದು.
ಈ ನಿರ್ಬಂಧವು ಅಂತರಾಷ್ಟ್ರೀಯ ಸರ್ವ-ಕಾರ್ಗೋ ಕಾರ್ಯಾಚರಣೆಗಳಿಗೆ ಮತ್ತು ಡಿಜಿಸಿಎಯಿಂದ ವಿಶೇಷ ಅನುಮತಿಯನ್ನು ಪಡೆದಿರುವ ಯಾನಗಳಿಗೆ ಅನ್ವಯಿಸುವುದಿಲ್ಲ ಎಂದು ಆದೇಶದಲ್ಲಿ ತಿಳಿಸಲಾಗಿದೆ.
Next Story





