Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಕರ್ನಾಟಕ
  4. ಕಳಸ: ಮೂಲಸೌಕರ್ಯಗಳಿಲ್ಲದ ಕಂಚಿನಕೆರೆ...

ಕಳಸ: ಮೂಲಸೌಕರ್ಯಗಳಿಲ್ಲದ ಕಂಚಿನಕೆರೆ ಪರಿಶಿಷ್ಟರ ಕಾಲನಿ

ಕಾಲನಿ ಮಧ್ಯೆ ಕೆಸರು ರಸ್ತೆಯಲ್ಲಿ ತಿರುಗಾಟಕ್ಕೆ ಸರ್ಕಸ್

ವಾರ್ತಾಭಾರತಿವಾರ್ತಾಭಾರತಿ29 Aug 2021 11:39 PM IST
share
ಕಳಸ: ಮೂಲಸೌಕರ್ಯಗಳಿಲ್ಲದ ಕಂಚಿನಕೆರೆ ಪರಿಶಿಷ್ಟರ ಕಾಲನಿ

ಚಿಕ್ಕಮಗಳೂರು, ಆ.29: ಇತ್ತೀಚೆಗಷ್ಟೇ ತಾಲೂಕು ಕೇಂದ್ರದ ಸ್ಥಾನ ಮಾನ ಪಡೆದಿರುವ ಜಿಲ್ಲೆಯ ಕಳಸ ಪಟ್ಟಣದ ಕೂಗಳತೆ ದೂರದಲ್ಲಿರುವ ಕಂಚಿನಕೆರೆ ಗ್ರಾಮದಲ್ಲಿನ ಪರಿಶಿಷ್ಟರ ಕಾಲನಿ ಮೂಲಸೌಕರ್ಯಗಳಿಂದ ವಂಚಿತವಾಗಿದ್ದು, ಕಾಲನಿ ಸಂಪರ್ಕಕ್ಕೆ ಸುಸಜ್ಜಿತ ರಸ್ತೆ, ಸಮರ್ಪಕ ಕುಡಿಯುವ ನೀರಿನ ಸರಬರಾಜು ವ್ಯವಸ್ಥೆ ಇಲ್ಲದೇ ನಿವಾಸಿಗಳು ನಿತ್ಯ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.

ಕಳಸ ಪಟ್ಟಣ ಸಮೀಪದಲ್ಲಿರುವ ಕಂಚಿನ ಕೆರೆ ಗ್ರಾಮದಲ್ಲಿ ಸುಮಾರು 70 ಮನೆಗಳಿದ್ದು, ಈ ಪೈಕಿ ಪರಿಶಿಷ್ಟ ಜಾತಿಯವರ ಸುಮಾರು 30 ಮನೆಗಳಿವೆ. ಈ ಗ್ರಾಮ ಸಂಪರ್ಕಕ್ಕೆ ಪಟ್ಟಣದಲ್ಲಿರುವ ಕಳಶೇಶ್ವರ ದೇವಾಲಯದಿಂದ ಭದ್ರಾ ನದಿ ತಟದ ವಶಿಷ್ಟಾಶ್ರಮ ಎಂಬಲ್ಲಿಗೆ ಕಾಂಕ್ರೀಟ್ ರಸ್ತೆ ಇದೆ. ಈ ರಸ್ತೆ ಪಕ್ಕದಲ್ಲೇ ಪರಿಶಿಷ್ಟರ ಕಾಲನಿ ಇದ್ದು, ವಶಿಷ್ಟಾಶ್ರಮ ಸಂಪರ್ಕ ರಸ್ತೆಯಿಂದ ಕಾಲನಿ ಸಂಪರ್ಕಕ್ಕಿರುವ ಮಣ್ಣಿನ ಕಚ್ಛಾ ರಸ್ತೆ ಮಳೆಗಾಲದಲ್ಲಿ ಸಂಪೂರ್ಣವಾಗಿ ಕೆಸರುಮಯವಾಗುತ್ತದೆ. ಇದರಿಂದಾಗಿ ಕಾಲನಿ ನಿವಾಸಿಗಳು ಮಳೆಗಾಲದ 6 ತಿಂಗಳು ಕೆಸರು ರಸ್ತೆಯಲ್ಲೇ ತಿರುಗಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಕಾಲನಿ ಸಂಪರ್ಕಕ್ಕಿರುವ ಕಚ್ಛಾ ರಸ್ತೆಯ ಎರಡೂ ಬದಿಯಲ್ಲಿ ಮನೆಗಳಿದ್ದು, ರಸ್ತೆಯ ಒಂದು ಬದಿಯಲ್ಲಿ ಚರಂಡಿ ನಿರ್ಮಿಸಿದ್ದು, ಮತ್ತೊಂದು ಬದಿಯಲ್ಲಿ ಚರಂಡಿಯೇ ಇಲ್ಲ. ಇರುವ ಒಂದು ಚರಂಡಿಯಲ್ಲಿ ಮಣ್ಣು ತುಂಬಿಕೊಂಡಿದ್ದು, ಮಳೆ ನೀರು ರಸ್ತೆ ಮೇಲೆ ಹರಿದು ರಸ್ತೆ ಸಂಪೂರ್ಣವಾಗಿ ಕೆಸರಿನಿಂದ ಆವೃತವಾಗಿದೆ. ರಸ್ತೆ ಒಂದು ಬದಿಯ ಇಳಿಜಾರಿನಲ್ಲಿ ಮನೆಗಳಿದ್ದು, ರಸ್ತೆಯ ಕೆಸರು ನೀರು ಕೆಳ ಬದಿಯ ಮನೆಗಳ ಅಂಗಳಕ್ಕೆ ಹರಿಯುತ್ತಿರುವುದರಿಂದ ನಿವಾಸಿಗಳು ನಿತ್ಯ ಸಂಕಟ ಅನುಭವಿಸುವಂತಾಗಿದೆ. ಕೆಸರು ರಸ್ತೆಯ ಕಾರಣಕ್ಕೆ ಕಾಲನಿಗೆ ಆಟೊದಂತಹ ವಾಹನಗಳ ಚಾಲಕರೂ ಬಾಡಿಗೆಗೆ ಬರಲು ಹಿಂದೇಟು ಹಾಕುತ್ತಿದ್ದಾರೆ. ಕಾಲನಿ ನಿವಾಸಿಗಳು ಪ್ರತಿದಿನ ಮನೆ ಎದುರಿನ ಕೆಸರು ರಸ್ತೆಯಲ್ಲಿ ಸರ್ಕಸ್ ಮಾಡುತ್ತಾ ತಿರುಗಾಡಬೇಕಾದ ಪಡಿಪಾಟಲು ಅನುಭವಿಸುತ್ತಿದ್ದಾರೆ.

ಕಾಲನಿ ಸಂಪರ್ಕಕ್ಕೆ ಕಾಂಕ್ರೀಟ್ ರಸ್ತೆ ನಿರ್ಮಿಸಿಕೊಡುವಂತೆ ಕಾಲನಿ ನಿವಾಸಿಗಳು ಅನೇಕ ಬಾರಿ ಸ್ಥಳೀಯ ಗ್ರಾಮ ಪಂಚಾಯತ್‍ಗೆ ಮನವಿ ಮಾಡಿದ್ದಾರೆ. ಆದರೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳಿಂದ ಕೇವಲ ಭರವಸೆ ಸಿಗುತ್ತಿದೆಯೇ ಹೊರತು ಭರವಸೆ ಮಾತ್ರ ಈಡೇರದಂತಾಗಿದ್ದು, ಪ್ರತೀ ವರ್ಷದ ಮಳೆಗಾಲದಲ್ಲಿ ನಿವಾಸಿಗಳು ಕೆಸರು ರಸ್ತೆಯಲ್ಲಿ ಜನಪ್ರತಿನಿಧಿಗಳಿಗೆ ಹಿಡಿಶಾಪ ಹಾಕುತ್ತಾ ತಿರುಗಾಡುವಂತಹ ಸಂಕಟ ಅನುಭವಿಸುತ್ತಿದ್ದಾರೆ.

ಇನ್ನು ಕಾಲನಿ ಪಕ್ಕದಲ್ಲೇ ವಿಶಿಷ್ಟಾಶ್ರಮಕ್ಕೆ ಸಂಪರ್ಕ ಕಲ್ಪಿಸುವ ಸಿಮೆಂಟ್ ರಸ್ತೆಯನ್ನು ಅವೈಜ್ಞಾನಿಕವಾಗಿ ನಿರ್ಮಿಸಿದ್ದು, ರಸ್ತೆ ಬದಿಯಲ್ಲಿ ನಿರ್ಮಿಸಲಾಗಿರುವ ಬಾಕ್ಸ್ ಚರಂಡಿಯನ್ನು ಕಳಪೆಯಾಗಿ ನಿರ್ಮಿಸಿರುವುದರಿಂದ ಚರಂಡಿಯಲ್ಲಿ ನೀರು ಹರಿಯದೇ ಮಣ್ಣು ತುಂಬಿಕೊಂಡಿದೆ. ಚರಂಡಿಯಲ್ಲಿ ನೀರು ಹರಿಯದೇ ಮಳೆ ನೀರು ರಸ್ತೆ ಮೇಲೆಯೇ ಹರಿಯುತ್ತಿದೆ. ಗ್ರಾಮ ಪಂಚಾಯತ್ ಚರಂಡಿಯಲ್ಲಿನ ಹೂಳು ತೆರವು ಮಾಡಲು ಇತ್ತ ತಲೆ ಹಾಕದಿರುವುದರಿಂದ ಚರಂಡಿ ಮಣ್ಣು, ತ್ಯಾಜ್ಯ ತುಂಬಿಕೊಂಡು ಶಿಥಿಲಗೊಳ್ಳುತ್ತಿದೆ. 

ಚರಂಡಿ ತಳ ಭಾಗದಲ್ಲಿ ಹಾಕಲಾಗಿರುವ ರಾಡ್‍ಗಳು ಕಾಣಿಸುತ್ತಿದ್ದು, ಕಳಪೆ ಕಾಮಗಾರಿಯನ್ನು ಮಾಡಿದ್ದಾರೆ. 1ಲಕ್ಷ ರೂ, ವೆಚ್ಚದ ಕಾಮಗಾರಿ ಮಾಡಿ 5 ಲಕ್ಷ ರೂ. ವೆಚ್ಚ ಕಾಮಗಾರಿ ಎಂದು ನಾಮಫಲಕ ಹಾಕಿದ್ದಾರೆ. ಕಾಮಗಾರಿಗೆಂದು ಎಂ ಸ್ಯಾಂಡ್ ತಂದು ಹಿಂದಕ್ಕೆ ಕೊಂಡೊಯ್ದಿದ್ದಾರೆ. ಹೆಸರೇ ಕೇಳದ ಕಳಪೆ ಗುಣಮಟ್ಟದ ಸಿಮೆಂಟ್‍ಅನ್ನು ಕಾಮಗಾರಿಗೆ ಬಳಸಿದ್ದಾರೆ. ಗ್ರಾಪಂ ಪಿಡಿಒಗೆ ದೂರು ಹೇಳಿದ ಬಳಿಕ ಗುತ್ತಿಗೆದಾರರು ಕೆಲಸ ನಿಲ್ಲಿಸಿ ಹೋದವರು ಮತ್ತೆ ಇತ್ತ ತಲೆ ಹಾಕಿಲ್ಲ ಎನ್ನುತ್ತಾರೆ ಕಾಲನಿ ನಿವಾಸಿಗಳು.

ಕಂಚಿನಕೆರೆ ದಲಿತರ ಕಾಲನಿಗೆ ಸಮರ್ಪಕ ನೀರು ಪೂರೈಕೆಯಾಗುತ್ತಿಲ್ಲ ಎಂಬುದು ನಿವಾಸಿಗಳ ಅಳಲಾಗಿದ್ದು, ಬೋರ್‍ವೆಲ್ ಒಂದರಿಂದ ವಾರದಲ್ಲಿ ಎರಡು ದಿನ ಮಾತ್ರ ನೀರು ಬಿಡುತ್ತಾರೆ. ಅದನ್ನೂ ಸರಿಯಾಗಿ ಬಿಡದ ಪರಿಣಾಮ ಹೊಳೆಯಿಂದ ನೀರು ಹೊತ್ತು ತಂದು ಕುಡಿಯಬೇಕಿದೆ. ಗ್ರಾಪಂ ಸಿಬ್ಬಂದಿಯನ್ನು ವಿಚಾರಿಸಿದರೇ ಮೋಟರ್ ಕೆಟ್ಟು ಹೋಗಿದೆ ಎನ್ನುತ್ತಿದ್ದಾರೆ. ಹೊಸ ಮೋಟರ್ ಅಳವಡಿಸಲು ಗ್ರಾಪಂ ಮುಂದಾಗುತ್ತಿಲ್ಲ ಎಂದು ನಿವಾಸಿಗಳು ಆರೋಪಿಸುತ್ತಿದ್ದಾರೆ.

ಗ್ರಾ.ಪಂ ಅಧಿಕಾರಿಗಳು ತಲೆ ಹಾಕಿಲ್ಲ: ಕಂಚಿನಕೆರೆ ದಲಿತರ ಕಾಲನಿಯಲ್ಲಿರುವ ಮಣ್ಣಿನ ರಸ್ತೆ ಮಳೆಯಿಂದಾಗಿ ಕೆಸರುಗದ್ದೆಯಾಗುತ್ತಿದೆ. ಪ್ರತೀ ವರ್ಷ ಇದೇ ಗೋಳಾಗಿದೆ. ವೃದ್ಧರು, ಮಕ್ಕಳು ಈ ಕೆಸರು ರಸ್ತೆಯಲ್ಲಿ ತಿರುಗಾಡಲು ಸಾಧ್ಯವಾಗುತ್ತಿಲ್ಲ. ಜೋರು ಮಳೆಯಾದಾಗ ಕೆಸರು ನೀರು ಮನೆ ಅಂಗಳಕ್ಕೆ ಹರಿದು ಮನೆಯೊಳಗೂ ನುಗ್ಗುತ್ತಿದೆ. ಕಾಲನಿಯಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಿಸಿಕೊಡಿ ಎಂದು ಅನೇಕ ಬಾರಿ ಗ್ರಾಮ ಪಂಚಾಯತ್‍ಗೆ ಅರ್ಜಿ ನೀಡಿದ್ದರೂ ಅಧಿಕಾರಿಗಳು ನಮ್ಮ ಸಮಸ್ಯೆಯನ್ನು ಪರಿಶೀಲನೆ ಮಾಡಲೂ ಇತ್ತ ತಲೆ ಹಾಕಿಲ್ಲ. ರಸ್ತೆ, ಚರಂಡಿಗೆ ಅನುದಾನ ಇಟ್ಟಿದ್ದೇವೆ ಎನ್ನುತ್ತಿದ್ದಾರೆ. ಆದರೆ ಕಾಲನಿಯಲ್ಲಿ ಯಾವ ಕಾಮಗಾರಿಯನ್ನೂ ಇದುವರೆಗೂ ಮಾಡಿಲ್ಲ. ಮೂಲಸೌಕರ್ಯಗಳಿಲ್ಲದೇ ನಾವು ಅನಾಗರಿಕರಂತೆ ಬದುಕುತ್ತಿದ್ದೇವೆ.

- ಶರತ್, ಕಂಚಿನಕೆರೆ ಪರಿಶಿಷ್ಟರ ಕಾಲನಿ ನಿವಾಸಿ

ಚುನಾವಣೆ ಬಹಿಷ್ಕರಿಸುತ್ತೇವೆ: ಕಾಲನಿಗೆ ಸಮರ್ಪಕವಾಗಿ ಕುಡಿಯುವ ನೀರು ಪೂರೈಕೆಯಾಗುತ್ತಿಲ್ಲ. ವಾರದಲ್ಲಿ ಮೂರು ದಿನಕ್ಕೊಮ್ಮೆ ನೀರು ಬಿಡುತ್ತಾರಾದರೂ ಅದನ್ನೂ ಸರಿಯಾಗಿ ಪೂರೈಕೆ ಮಾಡುತ್ತಿಲ್ಲ. ಕೇಳಿದರೇ ಮೋಟರ್ ಹಾಳಾಗಿದೆ ಎನ್ನುತ್ತಾರೆಯೇ ಹೊರತು ಮೋಟರ್ ದುರಸ್ತಿಗೆ ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಕುಡಿಯುವ ನೀರಿಗಾಗಿ ಕಾಲನಿಯ ಜನರು ಸಮೀಪದ ಭದ್ರಾ ನದಿಗೆ ಹೋಗಿ ತರಬೇಕಾದ ಕಷ್ಟ ಅನುಭವಿಸುತ್ತಿದ್ದೇವೆ. ನಮ್ಮ ಗೋಳನ್ನೂ ಯಾವ ಅಧಿಕಾರಿಗಳು, ಜನಪ್ರತನಿಧಿಗಳೂ ಕೇಳಿಸಿಕೊಳ್ಳುತ್ತಿಲ್ಲ. ಈ ಕಾರಣಕ್ಕೆ ಮುಂದಿನ ತಾಪಂ, ಜಿಪಂ ಚುನಾವಣೆ ಬಹಿಷ್ಕರಿಸಲು ನಿರ್ಧರಿಸಿದ್ದೇವೆ.

- ಕಿಟ್ಟಿ, ಕಾಲನಿ ನಿವಾಸಿ

 
 

share
ವಾರ್ತಾಭಾರತಿ
ವಾರ್ತಾಭಾರತಿ
Next Story
X