ಬಂಗಾಳದ ಬಿಜೆಪಿ ಶಾಸಕ ತನ್ಮಯ್ ಘೋಷ್ ಟಿಎಂಸಿಗೆ ಸೇರ್ಪಡೆ

Photo: Twitter @AITCofficial
ಕೋಲ್ಕತಾ: ಬಿಷ್ಣುಪುರದ ಬಿಜೆಪಿ ಶಾಸಕ ತನ್ಮಯ್ ಘೋಷ್ ಅವರು ಸೋಮವಾರ ತೃಣಮೂಲ ಕಾಂಗ್ರೆಸ್ ಸೇರಿದರು. ಬಿಜೆಪಿ ಸೇಡು ತೀರಿಸಿಕೊಳ್ಳುವ ರಾಜಕಾರಣ ಮಾಡುತ್ತಿದೆ ಎಂದು ಆರೋಪಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಘೋಷ್, ಪಶ್ಚಿಮ ಬಂಗಾಳದ ಜನರಲ್ಲಿ ಗೊಂದಲ ಸೃಷ್ಟಿಸಲು ಬಿಜೆಪಿ ಕೂಡ ಪ್ರಯತ್ನಿಸುತ್ತಿದೆ ಎಂದ ಘೋಷ್ ಈ ಕಾರಣಕ್ಕೆ ಟಿಎಂಸಿ ಸೇರುತ್ತಿದ್ದೇನೆ ಎಂದರು.
"ನಾನು ಪಶ್ಚಿಮ ಬಂಗಾಳದ ಕಲ್ಯಾಣಕ್ಕಾಗಿ ಟಿಎಂಸಿ ಗೆ ಸೇರಲು ಎಲ್ಲರನ್ನು ಕೋರುತ್ತೇನೆ. ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಕೈಗಳನ್ನು ಬಲಪಡಿಸುವ ಅವಶ್ಯಕತೆಯಿದೆ ”ಎಂದು ಅವರು ಹೇಳಿದರು.
Next Story





