ಜಾಹೀರಾತಿಗೂ ಪಶುಪಾಲನಾ ಸೇವಾ ಇಲಾಖೆಗೆ ಯಾವುದೇ ಸಂಬಂಧವಿಲ್ಲ: ಡಾ.ಮಂಜುನಾಥ್
ಬೆಂಗಳೂರು : ಇತ್ತೀಚೆಗೆ ಮಾಧ್ಯಮಗಳಲ್ಲಿ “ಗ್ರಾಮೀಣ ಪಶು ಸಂಗೋಪನಾ ನಿಗಮ ನಿಯಮಿತ” ಎಂಬ ಸಂಸ್ಥೆಯ ವತಿಯಿಂದ ಪಶುಸಂಗೋಪನಾ ಕಾರ್ಯಕರ್ತ ಹುದ್ದೆಗೆ ಜಾಹಿರಾತು ಪ್ರಕಟವಾಗಿದ್ದು, ಸದರಿ ಸಂಸ್ಥೆಗೂ ಮತ್ತು ಅದರ ಜಾಹೀರಾತಿಗೂ ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಗೆ ಯಾವುದೇ ಸಂಬಂಧವಿರುವುದಿಲ್ಲ ಎಂದು ನಿರ್ದೇಶಕರು ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಗೆ ಸಂಬಂಧಪಟ್ಟಂತಹ ಯಾವುದೇ ಯೋಜನೆಗಳಾಗಲಿ, ಜಾಹೀರಾತುಗಳಾಗಲಿ ಅಥವಾ ಯಾವುದೇ ನೇಮಕಾತಿಗೆ ಸಂಬಂಧಿಸಿದ ಪ್ರಕಟಣೆಗಳನ್ನು ಇಲಾಖೆಯ ಅಧಿಕೃತ ಜಾಲತಾಣ www.ahvs.kar.nic.in ನಲ್ಲಿ ಪ್ರಕಟಿಸಲಾಗುತ್ತದೆ.
ಆದ್ದರಿಂದ ಸಾರ್ವಜನಿಕರು ಇಂತಹ ಅನಧಿಕೃತ ನೇಮಕಾತಿ ಜಾಹೀರಾತುಗಳಿಗೆ ಮೋಸ ಹೋಗಬಾರದೆಂದು ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ನಿರ್ದೇಶಕರಾದ ಡಾ.ಮಂಜುನಾಥ್ ಎಸ್ ಪಾಳೇಗಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Next Story





