ಶರಾವತಿ ಸಂತ್ರಸ್ಥರಿಂದ ಗೃಹ ಸಚಿವರಿಗೆ ಮನವಿ

ಶಿವಮೊಗ್ಗ: ತಾಲೂಕಿನಲ್ಲಿ ಪುನರ್ವಸತಿ ಪಡೆದಿರುವ ಶರಾವತಿ ಮುಳುಗಡೆ ಸಂತ್ರಸ್ತರ ಬದುಕುವ ಹಕ್ಕನ್ನು ಪುನಶ್ಚೇತನಗೊಳಿಸಲು ವಾಸದ ಮನೆಗಳಿಗೆ ಹಾಗೂ ಸಾಗುವಳಿ ಭೂಮಿಗೆ ಹಕ್ಕುಪತ್ರ ನೀಡುವ ಕಾನೂನು ಪ್ರಕ್ರಿಯೆಯನ್ನು ಚುರುಕುಗೊಳಿಸಿ ನ್ಯಾಯ ಒದಗಿಸಿಕೊಡುವಂತೆ ಶಾಸಕ, ಗೃಹ ಸಚಿವ ಆರಗ ಜ್ಞಾನೇಂದ್ರರವರಿಗೆ ಶರಾವತಿ ಸಂತ್ರಸ್ಥರು ಮನವಿ ಸಲ್ಲಿಸಿದರು.
ತೀರ್ಥಹಳ್ಳಿಯ ಗುಡ್ಡೇಕೊಪ್ಪದಲ್ಲಿನ ಸಚಿವರ ಮನೆಗೆ ತೆರಳಿದ ಹಣಗೆರೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಅರೆನಲ್ಲಿ, ಕರಕುಚ್ಚಿ, ಸಂಕ್ಲಾಪುರ, ಕೊಂಬಿನ ಕೈ ಮತ್ತು ದೆಂಬ್ಲಾಪುರ, ಕೋಣಂದೂರಿನ ಗ್ರಾಮಸ್ಥರು ಮತ್ತು ಶರಾವತಿ ಮುಳುಗಡೆ ಸಂತ್ರಸ್ಥರು ಮನವಿ ಸಲ್ಲಿಸಿದರು.
Next Story





