ದ.ಕ. ಜಿಲ್ಲೆ: ಕೋವಿಡ್ಗೆ ಓರ್ವ ಬಲಿ; 193 ಮಂದಿಗೆ ಪಾಸಿಟಿವ್
![ದ.ಕ. ಜಿಲ್ಲೆ: ಕೋವಿಡ್ಗೆ ಓರ್ವ ಬಲಿ; 193 ಮಂದಿಗೆ ಪಾಸಿಟಿವ್ ದ.ಕ. ಜಿಲ್ಲೆ: ಕೋವಿಡ್ಗೆ ಓರ್ವ ಬಲಿ; 193 ಮಂದಿಗೆ ಪಾಸಿಟಿವ್](https://www.varthabharati.in/sites/default/files/images/articles/2021/08/30/304621-1630333999.jpg)
ಮಂಗಳೂರು, ಆ. 30: ದ.ಕ. ಜಿಲ್ಲೆಯಲ್ಲಿ ಸೋಮವಾರ 193 ಮಂದಿಗೆ ಪಾಸಿಟಿವ್ ದೃಢಪಟ್ಟಿದ್ದು, ಒಬ್ಬರು ಸಾವಿಗೀಡಾಗಿದ್ದಾರೆ. 256 ಮಂದಿ ಗುಣಮುಖರಾಗಿದ್ದಾರೆ. ಜಿಲ್ಲೆಯ ಪಾಸಿಟಿವಿಟಿ ದರ ಶೇ.1.86ರಷ್ಟಿದೆ.
ಜಿಲ್ಲೆಯಲ್ಲಿ ಇದುವರೆಗಿನ ಒಟ್ಟು ಸೋಂಕಿತರ ಸಂಖ್ಯೆ 1,09,802ಕ್ಕೆ ಏರಿಕೆಯಾಗಿದ್ದು, ಅವರಲ್ಲಿ 1,05,882 ಮಂದಿ ಗುಣಮುಖರಾಗಿದ್ದರೆ, ಒಟ್ಟು 1568 ಮಂದಿ ಸಾವಿಗೀಡಾಗಿದ್ದಾರೆ. ಪ್ರಸ್ತುತ 2352 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇದುವರೆಗಿನ ಒಟ್ಟು 86,177 ಮಾಸ್ಕ್ ಉಲ್ಲಂಘನೆ ಪ್ರಕರಣಗಳಲ್ಲಿ 1,04,72,820 ರೂ. ದಂಡ ವಸೂಲಿ ಮಾಡಲಾಗಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.
Next Story