ಬೆಂಗಳೂರು: ಉತ್ತರ ಪ್ರದೇಶ ಸರಕಾರದ ಬ್ಯಾನರ್ ಗೆ ಮಸಿ ಬಳಿದು ಆಕ್ರೋಶ
ಹಿಂದಿ ಹೇರಿಕೆ ಫಲಕ ಅಳವಡಿಕೆ: ಆರೋಪ
ಬೆಂಗಳೂರು, ಆ.30: ಉತ್ತರ ಪ್ರದೇಶ ಸರಕಾರದ ಜಾಹೀರಾತು ಫಲಕದಲ್ಲಿ ಹಿಂದಿ ಭಾಷೆ ಹೇರಿಕೆ ಮಾಡಲಾಗಿದೆ ಎಂದು ಆರೋಪಿಸಿ ಕನ್ನಡ ಪರ ಸಂಘಟನೆ ಕಾರ್ಯಕರ್ತರು ಮಸಿ ಬಳಿದು ಆಕ್ರೋಶ ಹೊರಹಾಕಿದರು.
ನಗರ ವ್ಯಾಪ್ತಿಯಲ್ಲಿ ಅಳವಡಿಸಿರುವ ಬೃಹತ್ ಫಲಕಗಳಲ್ಲಿ ಉತ್ತರ ಪ್ರದೇಶದ ಸಾಧನೆಗಳ ಕುರಿತು ಉಲ್ಲೇಖಿಸಿದ್ದು, ಇದರಲ್ಲಿ ಎಲ್ಲವೂ ಹಿಂದಿ ಭಾಷೆಯೇ ಇದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಕುರಿತು ಪ್ರತಿಕ್ರಿಯಿಸಿದ ಕನ್ನಡ ಪರ ಹೋರಾಟಗಾರ ರೂಪೇಶ್ ರಾಜಣ್ಣ, ಹಿಂದಿ ಹೇರಿಕೆ ಮಾಡುವ ಕ್ರಮ ಸರಿಯಲ್ಲ. ಯಾವುದೇ ಫಲಕಗಳಿರಲಿ ಕನ್ನಡವೂ ಉಲ್ಲೇಖಿಸಬೇಕು ಎಂದು ನಿಯಮವೇ ಇದೆ. ಆದರೂ, ನಿರ್ಲಕ್ಷ್ಯ ತೋರುವುದು ಸರಿಯಲ್ಲ ಎಂದು ತಿಳಿಸಿದರು.
ಫಲಕಗಳಲ್ಲಿ ಕನ್ನಡ ಭಾಷೆ ಮರೆತು ನಿರ್ಲಕ್ಷ್ಯ ತೋರುವವರ ವಿರುದ್ಧ ರಾಜ್ಯ ಸರಕಾರ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಬೇಕು. ಆಗ ಮಾತ್ರ ಕನ್ನಡ ಉಳಿಸಿ, ಬೆಳೆಸಲು ಸಾಧ್ಯ ಎಂದು ಅವರು ನುಡಿದರು.
Next Story





