ಜುಗಾರಿ ಆಟವಾಡುತ್ತಿದ್ದ ಆರೋಪ: ಏಳು ಮಂದಿ ಬಂಧನ
ಮಂಗಳೂರು, ಆ. 30: ಬಂಗ್ರಕುಳೂರು ಸಮೀಪ ಗುಂಪು ಸೇರಿಕೊಂಡು ಜುಗಾರಿ ಆಟವಾಡುತ್ತಿದ್ದ ಆರೋಪದ ಮೇಲೆ ಏಳು ಮಂದಿಯನ್ನು ಕಾವೂರು ಪೊಲೀಸರು ಬಂಧಿಸಿದ್ದಾರೆ.
ಸ್ಥಳೀಯ ನಿವಾಸಿಗಳಾದ ಚಂದ್ರಶೇಖರ್, ರಮೇಶ್, ಮೋವಿನ್ ರೆಬೆಲೋ, ಜಾಯ್ ಪ್ರಕಾಶ್ ಡಿಸೋಜ, ಮಾಧವ, ರತ್ನಾಕರ, ರಾಖಿ ಪಿರೇರಾ ಬಂಧಿತ ಆರೋಪಿಗಳು.
ರವಿವಾರ ಸಂಜೆ 7:15ರ ಸುಮಾರಿಗೆ ಬಂಗ್ರ ಕೂಳೂರು ಮನೆಯೊಂದರ ಖಾಲಿ ಜಾಗದಲ್ಲಿ ಗುಂಪಾಗಿ ಕುಳಿತುಕೊಂಡು ಹಣವನ್ನು ಪಣವಾಗಿಟ್ಟು ಜುಗಾರಿ ಆಟವಾಡುತ್ತಿರುವ ಬಗ್ಗೆ ಬಂದ ಖಚಿತ ಮಾಹಿತಿ ಮೇರೆಗೆ ಕಾವೂರು ಪೊಲೀಸರು ದಾಳಿ ನಡೆಸಿದ್ದಾರೆ. ಆರೋಪಿಗಳಿಂದ 9,500 ರೂ. ನಗದು ಮತ್ತು 4 ಮೊಬೈಲ್ ಫೋನ್‌ಗಳು ಹಾಗೂ 2 ಬೈಕ್‌ಗಳನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ.
Next Story





