ನಾಟಿ ವೈದ್ಯೆ ಅವ್ವಮ್ಮ ನಿಧನ
ಉಪ್ಪಿನಂಗಡಿ: ಇಲ್ಲಿನ ಕೂಟೇಲು ನಿವಾಸಿ, ದಿ. ಯೂಸುಬ್ ಅವರ ಪತ್ನಿ, ನಾಟಿ ವೈದ್ಯೆ ಅವ್ವಮ್ಮ ಅವರು (78) ಕೆಲ ದಿನಗಳ ಅನಾರೋಗ್ಯದಿಂದ ಸೋಮವಾರ ಬೆಳಗ್ಗೆ ನಿಧನ ಹೊಂದಿದರು.
ಅವ್ವಮ್ಮರವರು ಕೆಂಪು, ಸರ್ಪಸುತ್ತು, ವಿಷ ಜಂತು ಕಡಿತಕ್ಕೆ, ಮಹಿಳೆಯರ ಸಮಸ್ಯೆಗಳಿಗೆ ನಾಟಿ, ಆಯುರ್ವೇದ ಪದ್ಧತಿಯಲ್ಲಿ ಚಿಕಿತ್ಸೆ ನೀಡುತ್ತಿದ್ದರು.
ಸ್ಥಳೀಯವಾಗಿ "ಕೂಟೇಲು ಅಜ್ಜಿ" ಎಂದೇ ಚಿರಪರಿಚಿತರಾಗಿದ್ದ ಇವರ ಸೇವೆಯನ್ನು ಉಪ್ಪಿನಂಗಡಿ ಗ್ರಾಮ ಪಂಚಾಯತ್, ರೋಟರಿ ಕ್ಲಬ್ ಮೊದಲಾದ ಸಂಘ ಸಂಸ್ಥೆಗಳು ಗುರುತಿಸಿ, ಸನ್ಮಾನಿಸಿವೆ.
ಮೃತರು ಪುತ್ರರು ಪುತ್ರಿಯರು ಹಾಗು ಅಪಾರ ಬಂಧುಬಳಗವನ್ನು ಅಗಲಿದ್ದಾರೆ.
Next Story