ಬಂಗಾಳಿ ಲೇಖಕ ಬುದ್ಧದೇಬ್ ಗುಹಾ ನಿಧನ

photo: Twitter/Ministry of Culture
ಕೋಲ್ಕತ್ತ, ಅ. 30: ಖ್ಯಾತ ಬಂಗಾಳಿ ಲೇಖಕ ಬುದ್ಧದೇಬ್ ಗುಹಾ (85)ಅವರು ರವಿವಾರ ರಾತ್ರಿ ಕೋಲ್ಕತ್ತಾದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಕೋವಿಡ್ ಗೆ ಸಂಬಂಧಿಸಿದ ಆರೋಗ್ಯ ಸಮಸ್ಯೆ ಹಿನ್ನೆಲೆಯಲ್ಲಿ ಗುಹಾ ಅವರನ್ನು ಕೋಲ್ಕೊತ್ತಾದ ಬೆಲ್ಲಿ ವ್ಯೆ ಕ್ಲಿನಿಕ್ ನಲ್ಲಿ ಜುಲೈ 31ರಂದು ದಾಖಲಿಸಲಾಗಿತ್ತು.
ಗುಹಾ ಅವರು ಹಲವು ಕಾದಂಬರಿಗಳನ್ನು ರಚಿಸಿದ್ದು, ಅವುಗಳಲ್ಲಿ ಜಂಗಲ್ಮಹಲ್, ಕೊಯ್ಲೆರ್ ಕಚ್ಛೆ, ಕೊಜಗಾರ್, ಏಕ್ತು ಉಸ್ನೋಟರ್ ಜೋನ್ಯೊ, ಮಧುಕರಿ ಹಾಗೂ ಚೋರೊಯಿಬೇಟಿ ಪ್ರಮುಖವಾದವು. ಅವರ ಹೆಚ್ಚಿನ ಕಾದಂಬರಿಗಳು ಕೇಂದ್ರ ನಿಸರ್ಗ ಹಾಗೂ ಪೂರ್ವ ಭಾರತದ ಅರಣ್ಯ. ಅವರ ಹಾಲುಡ್ ಬಸಂತ ಕಾದಂಬರಿ 1976ರಲ್ಲಿ ಆನಂದ ಪುರಸ್ಕಾರ್ಗೆ ಪಾತ್ರವಾಗಿತ್ತು.
ಗುಹಾ ಅವರ ನಿಧನಕ್ಕೆ ಪಶ್ಚಿಮಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹಾಗೂ ಇತರ ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ.
Next Story





