ಉತ್ತರಾಖಂಡದಲ್ಲಿ ಮೇಘಸ್ಫೋಟ: ಐವರು ಸಾವು, ಇಬ್ಬರು ನಾಪತ್ತೆ
ಡೆಹ್ರಾಡೂನ್, ಆ. 31: ಉತ್ತರಾಖಂಡದ ಪಿತೋರ್ಗಡ ಜಿಲ್ಲೆಯ ಜುಮ್ಮಾ ಗ್ರಾಮದಲ್ಲಿ ಮೇಘ ಸ್ಫೋಟದಿಂದ ಸಂಭವಿಸಿದ ನೆರೆಯಿಂದಾಗಿ ಕನಿಷ್ಠ ಐವರು ಮಹಿಳೆಯರು ಮೃತಪಟ್ಟಿದ್ದಾರೆ ಹಾಗೂ ಇತರ ಇಬ್ಬರು ನಾಪತ್ತೆಯಾಗಿದ್ದಾರೆ.
ಎನ್ಡಿಆರ್ಎಫ್, ಎಸ್ಡಿಆರ್ಎಫ್, ಎಸ್ಎಸ್ಬಿ, ಕಂದಾಯ ಇಲಾಖೆ ಹಾಗೂ ಪೊಲೀಸ್ ಸಿಬ್ಬಂದಿ ಸೋಮವಾರ ಶೋಧ ಹಾಗೂ ರಕ್ಷಣಾ ಕಾರ್ಯಾಚರಣೆ ನಡೆಸುವ ಸಂದರ್ಭ ಅವಶೇಷಗಳು ಹಾಗೂ ಕೆಸರಿನಲ್ಲಿ ಐದು ಮೃತದೇಹಗಳು ಪತ್ತೆಯಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇಬ್ಬರು ನಾಪತ್ತೆಯಾಗಿದ್ದಾರೆ. ಅವರ ಶೋಧ ಹಾಗೂ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ. ಮೃತಪಟ್ಟವರ ಕುಟುಂಬದ ಸದಸ್ಯರಿಗೆ ತಲಾ 4 ಲಕ್ಷ ರೂಪಾಯಿ ಪರಿಹಾರ ಮಂಜೂರು ಮಾಡಲಾಗಿದೆ ಎಂದು ಪಿತೋರ್ಗಢದ ಜಿಲ್ಲಾಧಿಕಾರಿ ಚೌಹಾಣ್ ತಿಳಿಸಿದ್ದಾರೆ.
Next Story





