ಬೆಂಗಳೂರು: ವಿದೇಶಿ ಅಂಚೆ ಮೂಲಕ ಜಿಂಕೆ ಚರ್ಮ ಸಾಗಾಟ
ಬೆಂಗಳೂರು, ಆ.31: ಅಂಚೆ ಮೂಲಕ ಜಿಂಕೆ ಚರ್ಮವನ್ನು ಅಕ್ರಮವಾಗಿ ಕಳ್ಳಸಾಗಾಣಿಕೆ ಆರೋಪ ಪ್ರಕರಣವನ್ನು ಬೆಂಗಳೂರು ಕಸ್ಟಮ್ಸ್ ಅಧಿಕಾರಿಗಳು ಭೇದಿಸಿದ್ದಾರೆ.
ವಿದೇಶಿ ಅಂಚೆ ಮೂಲಕ ಬೆಂಗಳೂರಿಗೆ ಅಕ್ರಮವಾಗಿ ಟ್ಯಾನ್ ಸ್ಪಾಟೆಡ್ ಫಾಲೋ ಜಿಂಕೆ ಚರ್ಮವನ್ನು ಕಳ್ಳಸಾಗಾಣಿಕೆ ಮಾಡಲಾಗಿತ್ತು ಎನ್ನುವ ಮಾಹಿತಿ ಗೊತ್ತಾಗಿದೆ.
ಪೋಲೆಂಡ್‍ನಿಂದ ಅಕ್ರಮವಾಗಿ ಜಿಂಕೆ ಚರ್ಮವನ್ನು ಸಾಗಾಣಿಕೆ ಮಾಡಿರುವುದು ಬಯಲಿಗೆ ಬಂದಿದ್ದು, ಈ ಸಂಬಂಧ ವನ್ಯಜೀವಿ ಸಂರಕ್ಷಣಾ ಕಾಯ್ದೆ-1972ರ ಅಡಿಯಲ್ಲಿ ಟ್ಯಾನ್ ಸ್ಪಾಟೆಡ್ ಫಾಲೋ ಜಿಂಕೆ ಚರ್ಮ ಕಳ್ಳ ಸಾಗಾಣಿಕೆ ನಿಷೇಧಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಇನ್ನು, ಜಿಂಕೆ ಚರ್ಮವನ್ನು ವಶಕ್ಕೆ ಪಡೆದಿರುವ ಕಸ್ಟಮ್ಸ್ ಅಧಿಕಾರಿಗಳು, ಆರೋಪಿಗಳ ಪತ್ತೆಗಾಗಿ ತನಿಖೆ ಕೈಗೊಂಡಿದ್ದಾರೆ.
Next Story





