ಹುತಾತ್ಮರಿಗೆ ಅವಮಾನ: ಜಲಿಯನ್ ವಾಲಾಬಾಗ್ ನವೀಕರಣದ ಬಗ್ಗೆ ರಾಹುಲ್ ಗಾಂಧಿ

ಹೊಸದಿಲ್ಲಿ, ಆ. 31: ಹುತಾತ್ಮರನ್ನು ಅಗೌರವಿಸುವುದನ್ನು ತಾನು ಸಹಿಸಲಾರೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ. ಚಾರಿತ್ರಿಕ ಜಲಿಯನ್ ವಾಲಾಬಾಗ್ ನವೀಕರಣದ ಬಗ್ಗೆ ಸಾಮಾಜಿಕ ಜಾಲ ತಾಣದಲ್ಲಿ ಆಕ್ರೋಶ ವ್ಯಕ್ತವಾಗಿದ್ದು, ರಾಹುಲ್ ಗಾಂಧಿ ಕೂಡ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮಂಗಳವಾರ ಹಿಂದಿಯಲ್ಲಿ ಟ್ವೀಟ್ ಮಾಡಿರುವ ರಾಹುಲ್ ಗಾಂಧಿ, ಹುತಾತ್ಮ ಪದದ ಅರ್ಧ ತಿಳಿಯದಿದ್ದವರು ಮಾತ್ರ ಜಲಿಯನ್ ವಾಲಾಬಾಗ್ ಹುತಾತ್ಮರನ್ನು ಅಗೌರವಿಸುತ್ತಾರೆ. ತಾನು ಹುತಾತ್ಮನ ಪುತ್ರ. ಹುತಾತ್ಮರನ್ನು ಅಗೌರವಿಸುವುದನ್ನು ನಾನು ಯಾವುದೇ ಕಾರಣಕ್ಕೆ ಸಹಿಸಲಾರೆ. ನಾನು ಈ ಕ್ರೂರತೆಯನ್ನು ವಿರೋಧಿಸುತ್ತೇನೆ ಎಂದಿದ್ದಾರೆ.
ಕೇಂದ್ರ ಸರಕಾರ ಚರಿತ್ರೆಯನ್ನು ಅಳಿಸುತ್ತಿದೆ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಹಲವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ ಪ್ರಧಾನಿ ನರೇಂದ್ರ ಮೋದಿ ಅವರು ಈ ನವೀಕೃತ ಸ್ಮಾರಕವನ್ನು ಶನಿವಾರ ಉದ್ಘಾಟಿಸಿದ್ದರು.
Next Story





