'ನಮ್ಮ ನಾಡ ಒಕ್ಕೂಟ' ಉಡುಪಿ ಜಿಲ್ಲಾ ಸಮಿತಿ ರಚನೆ, ಅಧಿಕಾರ ಸ್ವೀಕಾರ ಸಮಾರಂಭ

ಬ್ರಹ್ಮಾವರ: 'ನಮ್ಮ ನಾಡ ಒಕ್ಕೂಟ' ಇದರ ಉಡುಪಿ ಜಿಲ್ಲಾ ಸಮಿತಿ ರಚನೆ ಹಾಗೂ ಉಡುಪಿ ಜಿಲ್ಲಾಧ್ಯಕ್ಷರ ಅಧಿಕಾರ ಸ್ವೀಕಾರ ಸಮಾರಂಭವು ಬ್ರಹ್ಮಾವರದ ಮದರ್ ಪ್ಯಾಲೇಸ್ ಆಡಿಟೊರಿಯಂನಲ್ಲಿ ರವಿವಾರ ನಡೆಯಿತು.
ನಮ್ಮ ನಾಡ ಒಕ್ಕೂಟ ಸೆಂಟ್ರಲ್ ಕಮಿಟಿ ಉಪಾಧ್ಯಕ್ಷ ಡಾ. ರಿಝ್ವಾನ್ ಅಹ್ಮದ್ ಕಾರ್ಕಳ ಅವರ ಅಧ್ಯಕ್ಷತೆಯಲ್ಲಿ ಉಡುಪಿ ಜಿಲ್ಲಾ ಅಧ್ಯಕ್ಷರ ಹಾಗೂ ಜಿಲ್ಲಾ ಸಮಿತಿ ಸದಸ್ಯರ ಪದಗ್ರಹಣ ಸಮಾರಂಭ ನಡೆಯಿತು.
ಉಡುಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಝಮೀರ್ ಅಹ್ಮದ್ ರಶಾದಿ ಕುರ್ ಆನ್ ಪಠಣದೊಂದಿಗೆ ಸಮಾರಂಭ ಆರಂಭಗೊಂಡಿತು. ಸೆಂಟ್ರಲ್ ಕಮಿಟಿ ಸಂಘಟನಾ ಕಾರ್ಯದರ್ಶಿ ಹುಸೈನ್ ಹೈಕಾಡಿ ಪ್ರಾಸ್ತಾವಿಕ ಭಾಷಣ ಮಾಡಿದರು.
ಮುಷ್ತಾಕ್ ಅಹ್ಮದ್ ಬೆಳ್ವೆ ನಮ್ಮ ನಾಡ ಒಕ್ಕೂಟ ಉಡುಪಿ ಜಿಲ್ಲಾಧ್ಯಕ್ಷರಾಗಿ ಹಾಗೂ ಜಿ. ರೆಹಾನ್ ಅಹ್ಮದ್ ತ್ರಾಸಿ ಉಡುಪಿ ಜಿಲ್ಲಾ ಯುವ ಘಟಕದ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದರು. ಜೊತೆಗೆ ಇತರ 16 ಜಿಲ್ಲಾ ಪದಾಧಿಕಾರಿಗಳಾಗಿ ಹಾಗೂ 27 ಮಂದಿ ಜಿಲ್ಲಾ ಸಮಿತಿ ಸದಸ್ಯರಾಗಿ ಆಯ್ಕೆಗೊಂಡರು.
ಅಧಿಕಾರ ಸ್ವೀಕರಿಸಿದ ನಂತರ ನೂತನ ಜಿಲ್ಲಾಧ್ಯಕ್ಷರು ಮಾತನಾಡುತ್ತಾ "ನನ್ನನ್ನು ತಾವುಗಳು ನಮ್ಮ ನಾಡ ಒಕ್ಕೂಟ ಇದರ ಉಡುಪಿ ಜಿಲ್ಲಾಧ್ಯಕ್ಷರಾಗಿ ಆಯ್ಕೆ ಮಾಡಿರುವುದಕ್ಕೆ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ. ತಾನಿಚ್ಚಿಸದಿದ್ದರೂ ನಿಮ್ಮೆಲ್ಲರ ಅಭಿಪ್ರಾಯಕ್ಕೆ ಮಣಿದು ಈ ಪದವನ್ನು ಸ್ವೀಕರಿಸುತ್ತಿದ್ದೇನೆ. ಒಂದು ಮಹತ್ತರವಾದ ಸಂಘಟನೆಯ ಜವಾಬ್ದಾರಿಯನ್ನು ತಾವೆಲ್ಲರೂ ನನ್ನ ಮೇಲಿರಿಸುವಿರಿ, ಇದನ್ನು ಮುನ್ನಡೆಸುವ ಸಾಮರ್ಥ್ಯ ಮತ್ತು ಅರ್ಹತೆ ತನ್ನಲ್ಲಿಲ್ಲ, ಆದರೂ ನಿಮ್ಮೆಲ್ಲರ ಸಹಕಾರ ಹಾಗೂ ಮಾರ್ಗದರ್ಶನವನ್ನು ಸದಾ ಅಪೇಕ್ಷಿಸುತ್ತೇನೆ ಎಂದು ಹೇಳಿದರು.
ಈ ಸಂದರ್ಭ ನಮ್ಮ ನಾಡ ಒಕ್ಕೂಟದ ಸರಕಾರಿ ಉದ್ಯೋಗ ಮಾಹಿತಿ ಶಿಬಿರಗಳ ತರಬೇತುದಾರರಾದ ಅಬ್ದುಲ್ ರಝಾಕ್ ಕಾಪು ಮತ್ತು ನೌಝಲ್ ಅಹ್ಮದ್ ಮುಲ್ಕಿ ಅವರ ಸೇವೆಯನ್ನು ಶ್ಲಾಘಿಸುತ್ತಾ ಒಕ್ಕೂಟದ ವತಿಯಿಂದ ಸನ್ಮಾನಿಸಲಾಯಿತು.
ಅಬ್ದುಲ್ ಸಮೀ ಹಳಗೇರಿ (ಅಧ್ಯಕ್ಷರು ಎನ್ಎನ್ಒ ಬೈಂದೂರು ತಾಲೂಕು ಘಟಕ) ಮತ್ತು ಮುಹಮ್ಮದ್ ಅಶ್ರಫ್ ಪಡುಬಿದ್ರಿ (ಅಧ್ಯಕ್ಷರು ಎನ್ಎನ್ಒ ಕಾಪು ತಾಲೂಕು ಘಟಕ) ಸನ್ಮಾನಿತರಾದವರ ವ್ಯಕ್ತಿ ಪರಿಚಯ ಮಾಡಿದರು.
ಮುಹಮ್ಮದ್ ಸಲೀಮ್ ಮೂಡಬಿದ್ರೆ (ಅಧ್ಯಕ್ಷರು ಎನ್ಎನ್ಒ ಸೆಂಟ್ರಲ್ ಕಮಿಟಿ) ಹಾಗೂ ಶಾಸಕ ಯು. ಟಿ. ಖಾದರ್ ಅವರು ವಿಡಿಯೋ ಕಾನ್ಫರೆನ್ಸ್ ಮೂಲಕ ಜಿಲ್ಲಾ ಪದಾಧಿಕಾರಿಗಳು ಮತ್ತು ಜಿಲ್ಲಾ ಸಮಿತಿ ಸದಸ್ಯರಿಗೆ ಶುಭ ಹಾರೈಸಿದರು.
ಮುಖ್ಯ ಅತಿಥಿಗಳಾಗಿ ಮಾಜಿ ಶಾಸಕ ಮೊಯ್ದಿನ್ ಬಾವ, ಶಭೀ ಅಹ್ಮದ್ ಖಾಝಿ (ಅಧ್ಯಕ್ಷರು ಜಮೀಯ್ಯತುಲ್ ಫಲಾಹ್ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆ) ಇನಾಯತುಲ್ಲಾ ಶಾಬಂದ್ರಿ (ಜಿಲ್ಲಾಧ್ಯಕ್ಷರುಎನ್ಎನ್ಒ ಉತ್ತರ ಕನ್ನಡ ಜಿಲ್ಲೆ) ನಖ್ವಾ ಯಹ್ಯಾ ಮಲ್ಪೆ (ಮಾಜಿ ಅಧ್ಯಕ್ಷರು, ವಕ್ಫ್ ಸಲಹಾ ಸಮಿತಿ ಉಡುಪಿ ಜಿಲ್ಲೆ) ಮುಹಮ್ಮದ್ ಇರ್ಶಾದ್ ನೇಜಾರ್ (ಜಿಲ್ಲಾ ಉಪಾಧ್ಯಕ್ಷರು ಎನ್ಎನ್ಒ ಉಡುಪಿ ಜಿಲ್ಲೆ) ಶುಭ ಹಾರೈಸಿ, ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು.
ಅಬ್ದುಲ್ ಹಮೀದ್ ಮೂಡುಬಿದಿರೆ (ಕೋಶಾಧಿಕಾರಿ ಎನ್ಎನ್ಒ ಸೆಂಟ್ರಲ್ ಕಮಿಟಿ) ಹಾಗೂ ಜಿಲ್ಲಾ ಪದಾಧಿಕಾರಿಗಳು ಮತ್ತು ಉಡುಪಿ ಜಿಲ್ಲೆಯ ತಾಲೂಕು ಘಟಕಗಳ ಅಧ್ಯಕ್ಷರು ವೇದಿಕೆಯ ಮೇಲೆ ಉಪಸ್ಥಿತರಿದ್ದರು.
ಶಾಕಿರ್ ಹುಸೈನ್ ಶೇಷಾ (ಅಧ್ಯಕ್ಷರು ಎನ್ಎನ್ಒ ಕಾರ್ಕಳ ಘಟಕ) ವಂದಿಸಿದರು. ಅಬ್ದುಲ್ ಶುಕೂರ್ ಬೆಳ್ವೆ (ಕಾರ್ಯದರ್ಶಿ ಎನ್ಎನ್ಒ ಹೆಬ್ರಿ ತಾಲೂಕು ಘಟಕ) ನಿರೂಪಣೆ ಮಾಡಿದರು. ಅಬ್ದುಲ್ ಸಮದ್ ಖಾನ್ ಕಾರ್ಕಳ (ಜೊತೆ ಕಾರ್ಯದರ್ಶಿ ಎನ್ಎನ್ಒ ಉಡುಪಿ ಜಿಲ್ಲೆ) ಕಾರ್ಯಕ್ರಮ ನಿರ್ವಹಿಸಿದರು.










