ಕಡಬ : ಯುವಕ ನೀರುಪಾಲು

ಕಡಬ : ನದಿ ನೀರಿನ ಸೆಳೆತಕ್ಕೆ ಯುವಕನೋರ್ವ ನೀರುಪಾಲಾದ ಘಟನೆ ಕಡಬ ಸಮೀಪದ ಕೆಮ್ಮಾರ ಸೇತುವೆಯ ಬಳಿ ಬುಧವಾರ ಸಂಭವಿಸಿದೆ.
ನೀರುಪಾಲಾದ ಯುವಕನನ್ನು ಸ್ಥಳೀಯ ನಿವಾಸಿ ಶಫೀಕ್(19) ಎಂದು ಗುರುತಿಸಲಾಗಿದೆ.
ವಿಪರೀತ ಮಳೆ ಸುರಿಯುತ್ತಿರುವುದರಿಂದ ನದಿಯಲ್ಲಿ ನೀರಿನ ಹರಿವು ಜೋರಾಗಿದ್ದು, ನೀರಿನಲ್ಲಿ ಕಣ್ಮರೆಯಾಗಿರುವುದಾಗಿ ತಿಳಿದುಬಂದಿದೆ. ಸ್ಥಳಕ್ಕೆ ಉಪ್ಪಿನಂಗಡಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಊರವರ ಸಹಾಯದಿಂದ ಯುವಕನ ಶೋಧ ಕಾರ್ಯ ಆರಂಭಗೊಂಡಿದೆ.
Next Story





