ಕಾಡೂರು ಗ್ರಾಪಂಗೆ ಕಲಿಕಾ ಅಧ್ಯಯನ ತಂಡ ಭೇಟಿ

ಬ್ರಹ್ಮಾವರ, ಸೆ.1: ಬಂಟ್ವಾಳ, ಮಂಗಳೂರು ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ತಾಲೂಕುಗಳ ಗ್ರಾಪಂ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಹಾಗೂ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ತಂಡವು ಕಾಡೂರು ಗ್ರಾಪಂನ ಘನ ಸಂಪನ್ಮೂಲ ನಿರ್ವಹಣಾ ಘಟಕ ಮತ್ತು ಮಳೆನೀರು ಕೊಯ್ಲು ಮಾದರಿ ಘಟಕಕ್ಕೆ ಭೇಟಿ ನೀಡಿದರು.
ಪುಣ್ಯಕೋಟಿ ಸಂಸ್ಥೆಯ ಪ್ರತಿನಿಧಿ ಶಿವರಾಮ್, ಕಾಡೂರು ಗ್ರಾಪಂ ಅಧ್ಯಕ್ಷ ಪಾಂಡುರಂಗ ಶೆಟ್ಟಿ, ಸದಸ್ಯರಾದ ಗಿರೀಶ್ ರಾವ್, ಜಲತಜ್ಞ ಜೋಸೆಫ್ ರೆಬೆಲ್ಲೋ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮಹೇಶ್ ಕೆ., ಘಟಕದ ಮೇಲ್ವಿಚಾರಕ ಸದಾಶಿವ ಮೊದಲಾದವರು ಉಪಸ್ಥಿತರಿದ್ದರು.
Next Story





