ಉಡುಪಿ ಜಿಲ್ಲೆಯಾದ್ಯಂತ ಉತ್ತಮ ಮಳೆ
![ಉಡುಪಿ ಜಿಲ್ಲೆಯಾದ್ಯಂತ ಉತ್ತಮ ಮಳೆ ಉಡುಪಿ ಜಿಲ್ಲೆಯಾದ್ಯಂತ ಉತ್ತಮ ಮಳೆ](https://www.varthabharati.in/sites/default/files/images/articles/2021/09/1/304868-1630503610.jpg)
ಸಾಂದರ್ಭಿಕ ಚಿತ್ರ
ಉಡುಪಿ, ಸೆ.1: ಉಡುಪಿ ಜಿಲ್ಲೆಯಾದ್ಯಂತ ಬುಧವಾರವೂ ಉತ್ತಮ ಮಳೆ ಯಾಗಿರುವ ಬಗ್ಗೆ ವರದಿಯಾಗಿದೆ.
ಕಳೆದ 24ಗಂಟೆ ಅವಧಿಯಲ್ಲಿ ಉಡುಪಿ- 3.7ಮಿ.ಮೀ., ಬ್ರಹ್ಮಾವರ- 6.2 ಮಿ.ಮೀ., ಕಾಪು- 2.2ಮಿ.ಮೀ., ಕುಂದಾಪುರ- 27.9ಮಿ.ಮೀ., ಬೈಂದೂರು- 21.7ಮಿ.ಮೀ., ಕಾರ್ಕಳ -5.6ಮಿ.ಮೀ., ಹೆಬ್ರಿ 17.0ಮಿ.ಮೀ. ಹಾಗೂ ಸರಾಸರಿ 14.8ಮಿ.ಮೀ. ಮಳೆಯಾಗಿದೆ. ಮಳೆಯಿಂದ ಬ್ರಹ್ಮಾವರ ತಾಲೂಕಿನ ಕೆಂಜೂರು ಗ್ರಾಮದ ಸಾಕು ಪೂಜಾರ್ತಿ ಎಂಬವರ ವಾಸ್ತವ್ಯದ ಮನೆಯ ಗೋಡೆ ಕುಸಿದು ಬಿದ್ದು ಸಂಪೂರ್ಣ ಹಾನಿ ಯಾಗಿದ್ದು, ಇದರಿಂದ ಸುಮಾರು ಒಂದು ಲಕ್ಷ ರೂ. ನಷ್ಟ ಉಂಟಾಗಿದೆ ಎಂದು ತಾಲೂಕು ಕಚೇರಿ ಮೂಲಗಳು ತಿಳಿಸಿವೆ.
Next Story