ಬಿಜೆಪಿಯವರು ಜನಾರ್ಶೀವಾದ ಯಾತ್ರೆ ನಡೆಸುವ ಬದಲು ಕ್ಷಮಾಪಣಾ ಯಾತ್ರೆ ನಡೆಸಬೇಕು: ಸಲೀಂ ಅಹ್ಮದ್

ದಾವಣಗೆರೆ: ಕೇಂದ್ರ –ರಾಜ್ಯ ಸರಕಾರಗಳ ಆಡಳಿತ ನಡೆಸುವಲ್ಲಿ ಸಂಪೂರ್ಣ ವಿಫಲವಾಗಿವೆ. ಈ ಹಿನ್ನಲೆಯಲ್ಲಿ ಬಿಜೆಪಿಯವರು ಜನಾರ್ಶೀವಾದ ನಡೆಸುವು ಬದಲು ಕ್ಷಮಾಪಣಾ ಯಾತ್ರೆ ನಡೆಸಬೇಕು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಹೇಳಿದರು.
ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರಕಾರ ಕಳೆದ 7 ವರ್ಷಗಳಲ್ಲಿ ಆಡಳಿತ ನಡೆಸುವಲ್ಲಿ ಸಂಪೂರ್ಣ ವಿಫಲವಾಗಿದೆ. ಜನರ ಸಂಕಷ್ಟ ಅನುಭವಿಸುವ ಸಂದರ್ಭದಲ್ಲಿ ಕೇಂದ್ರ ಸಚಿವರು ಜನಾರ್ಶೀವಾದ ಯಾತ್ರೆ ಮೂಲಕ ದೊಂಬರಾಟ ನಡೆಸಿದ್ದಾರೆ.
ದೇಶದಲ್ಲಿ ಅಡುಗೆ ಅನಿಲ, ಇಂಧನ ದರಗಳ ಏರಿಕೆಯಿಂದ ಜನರು ತತ್ತರಿಸಿದ್ದಾರೆ. ಕ್ಷೆಮೆ ಕೇಳಬೇಕಾದ ಕೇಂದ್ರ ಮಂತ್ರಿಗಳು ಆರ್ಶೀವಾದ ಯಾತ್ರೆ ನಡೆಸಿರುವುದು ಸರಿಯಲ್ಲ. ರೈತ ವಿರೋಧಿ ಕಾನೂನುಗಳ ಜಾರಿಗೆ ತಂದಿದ್ದಾರೆ, ಈ ಕಾಯ್ದೆ ವಿರುದ್ದ ದೇಶದಲ್ಲಿ ಹೋರಾಟ ನಡೆಯುತ್ತಿದೆ. ಇಂತಹ ಸಮಯದಲ್ಲಿ ಕೇಂದ್ರ ಮಂತ್ರಿಗಳು ಪ್ರಧಾನ ಮಂತ್ರಿಗಳ ಬಳಿ ದರ ಇಳಿಕೆ, ಅನುದಾನ ಬಿಡುಗಡೆ ಮಾಡುವಂತೆ ಕೇಳಬೇಕಾಗಿತ್ತು. ಅದರೆ ಅವರಿಗೆ ಕೇಳುವ ಧೈರ್ಯವಿಲ್ಲ. ಮುಂದಿನ ದಿನಗಳಲ್ಲಿ ಜನರೇ ಬಿಜೆಪಿ ವಿರುದ್ದ ಜನಾಕ್ರೋಶ ಯಾತ್ರೆ ನಡೆಸಲಿದ್ದಾರೆ ಎಂದರು.
ಮನ್ ಕಿ ಬಾತ್ ಮೂಲಕ ಜನರಿಗೆ ಸುಳ್ಳು ಭರವಸೆ ನೀಡುವ ಮೂಲಕ ದಾರಿ ತಪ್ಪಿಸುತ್ತಿದ್ದಾರೆ. ಸುಳ್ಳು ಹೇಳುವುದಕ್ಕಾಗಿ ಅವರಿಗೆ ಆಸ್ಕರ್ ಅವಾರ್ಡ್ ನೀಡಬೇಕು. ಕರೋನಾ 15 ದಿನದಲ್ಲಿ ಓಡಿಸುವುದಾಗಿ ಹೇಳಿದ ಪ್ರಧಾನಿಗಳು ಚಪ್ಪಾಳೆ, ತಟ್ಟಿದರು ಜಾಗಟೆ ಬಾರಿಸಿದರು. ಅದರೆ, ಕರೋನಾ ಮಾತ್ರ ಹೋಗಲಿಲ್ಲ. ಸರಕಾರಗಳ ನಿರ್ಲಕ್ಷ್ಯದಿಂದಾಗಿ ಕರೋನಾ ಜಾಸ್ತಿಯಾಗಿದೆ. ಕರೋನಾ ಸಮಯದಲ್ಲಿ ರಾಜ್ಯದಲ್ಲಿ 2 ಸಾವಿರ ಕೋಟಿ ಭ್ರಷ್ಟಚಾರ ನಡೆದಿದೆ. ಇದರ ಬಗ್ಗೆ ಲೆಕ್ಕ ಕೇಳಿದರೆ ಇದುವರೆಗೂ ನೀಡಿಲ್ಲ. ಪಿಎಂ ಕೇರ್‍ನಲ್ಲಿಯೂ ಹಣದ ಬಗ್ಗೆ ಮಾಹಿತಿ ನೀಡದ ಸರಕಾರವಿದು. ಸತ್ತವರ ಬಗ್ಗೆ ಸರಿಯಾದ ಮಾಹಿತಿ ಸರಕಾರ ನೀಡಲಿಲ್ಲ. ತಪ್ಪು ಮಾಹಿತಿ ನೀಡಿದ ಮನುಷ್ಯತ್ವವಿಲ್ಲದ, ನಿರ್ಜೀವ ಸರಕಾರ ಎಂದು ಟೀಕಿಸಿದರು.
‘ನರಕ ತೋರಿಸಿದ ಬಿಜೆಪಿ'
ಆ ಜನರಲ್ಲಿ ಕನಸುಗಳ ತುಂಬಿ ಅಧಿಕಾರಕ್ಕೆ ಬಂದ ಬಿಜೆಪಿ 7 ವರ್ಷಗಳಲ್ಲಿ ಜನರಿಗೆ ಸ್ವರ್ಗ ಬದಲು ನರಕ ತೋರಿಸಿದೆ. ಹೇಳುವುದು ಒಂದು ಮಾಡುವುದು ಮತ್ತೊಂದು ಎನ್ನುವುದ ಬಿಜೆಪಿಯ ಸಿದ್ದಾಂತವಾಗಿದೆ. ದೇಶದ ಎಲ್ಲಾ ಆಸ್ತಿಗಳನ್ನು ಖಾಸಗಿಯವರಿಗೆ ಮಾರಾಟ ಮಾಡುತ್ತಿದ್ದಾರೆ. ಏರಪೋರ್ಟ್‍ಗಳನ್ನು ಖಾಸಗಿಯವರಿಗೆ ಕೈಗೆ ನೀಡಿದ್ದಾರೆ. ಯುವಕರಿಗೆ ಉದ್ಯೋಗ ನೀಡುವ ಬದಲು ಕಸಿದುಕೊಂಡಿದ್ದಾರೆ ಎಂದು ಕೇಂದ್ರ ಸರಕಾರ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.
ಪಕ್ಷ ಸಂಘಟನೆಗೆ ಒತ್ತು
ಕಾಂಗ್ರೆಸ್ ಪಕ್ಷವನ್ನು ತಳಮಟ್ಟದಿಂದ ಸಂಘಟಿಸಲು ಪ್ರವಾಸ ಕೈಗೊಳ್ಳಲಾಗಿದೆ. ಈ ತಿಂಗಳಲ್ಲಿ ಗ್ರಾಪಂ ಸಮಿತಿ, 2 ತಿಂಗಳಲ್ಲಿ ಬೂತಮಟ್ಟದಲ್ಲಿ ಸಮಿತಿ ಮಾಡಲಾಗುವುದು. ಬೂತ್ ಮಟ್ಟದಲ್ಲಿ ಪಕ್ಷ ಸಂಘಟಿಸಲಾಗುವುದು. ಜಿಪಂ. ತಾಪಂ, ವಿಧಾನಸಭಾ ಚುನಾವಣೆಗಾಗಿ ಪಕ್ಷ ಸಂಘಟನೆ ಯಾವ ರೀತಿ ಮಾಡಬೇಕು ಎನ್ನುವ ಕುರಿತು ಚರ್ಚೆ ನಡೆಸಲಾಗುವುದು. ಮುಂದಿನ ದಿನಗಳಲ್ಲಿ ಜಿಲ್ಲೆಯಲ್ಲಿ 7 ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಜಯಬೇರಿ ಬಾರಿಸಲಿದೆ. ಕೇಂದ್ರದಲ್ಲಿ ಯುಪಿಎ ಆಡಳಿತಕ್ಕೆ ಬರಲಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಚ್.ಬಿ.ಮಂಜಪ್ಪ, ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ ಶೆಟ್ಟಿ, ಕೆಪಿಸಿಸಿ ವಕ್ತಾರ ಡಿ.ಬಸವರಾಜ್, ಜಿಪಂ ಸದಸ್ಯ ಬಸವಂತಪ್ಪ, ಯುವ ಕಾಂಗ್ರೆಸ್ ಅಧ್ಯಕ್ಷ ನಿಖಿಲ್ ಕೊಂಡಜ್ಜಿ ಸೇರಿದಂತೆ ಇತರರು ಇದ್ದರು.







