ಶಿವಮೊಗ್ಗ: ಬೈಕ್ ಕಳವು

ಶಿವಮೊಗ್ಗ, ಸೆ.01: ಸ್ನೇಹಿತನೊಂದಿಗೆ ಹೊಟೇಲ್‌ಗೆ ಹೋಗಿ ಊಟ ಮುಗಿಸಿ ವಾಪಾಸ್ ಬರುಷ್ಟರಲ್ಲಿ ಬೈಕ್ ಕಳ್ಳತನವಾಗಿದೆ. ಶಿವಮೊಗ್ಗದ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದ ಬಳಿ ಈ ಘಟನೆ ಸಂಭವಿಸಿದೆ.
ಸಂತೆಕಡೂರು ನಿವಾಸಿ ಉಮೇಶ್ ಅವರು ತಮ್ಮ ಸ್ನೇಹಿತನೊಂದಿಗೆ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದ ಬಳಿ, ಹೊಟೇಲ್ ಒಂದಕ್ಕೆ ಊಟಕ್ಕೆ ತೆರಳಿದ್ದರು. ತಮ್ಮ ಹೋಂಡಾ ಶೈನ್ ಬೈಕನ್ನು ಹೊಟೇಲ್ ಮುಂಭಾಗ ನಿಲ್ಲಿಸಿದ್ದರು. ರಾತ್ರಿ 10.30ಕ್ಕೆ ಊಟಕ್ಕೆ ಹೋಗಿ 11.30ರ ಹೊತ್ತಿಗೆ ಹೊರಗೆ ಬಂದಿದ್ದಾರೆ.
ವಾಪಸ್ ಬಂದಾಗ ಬೈಕ್ ನಾಪತ್ತೆಯಾಗಿದೆ. ಸುತ್ತಮುತ್ತಲು ಹುಡುಕಿದರೂ ಬೈಕ್ ಪತ್ತೆಯಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ದೊಡ್ಡಪೇಟೆ ಠಾಣೆಯಲ್ಲಿ ದೂರು ನೀಡಿದ್ದಾರೆ.
Next Story





