ಡೀಸೆಲ್, ಪೆಟ್ರೋಲ್, ಅಡುಗೆ ಅನಿಲ ಬೆಲೆ ಏರಿಕೆಯಿಂದ ಕೇಂದ್ರಕ್ಕೆ 23 ಲಕ್ಷ ಕೋ.ರೂ.ಗೂ ಅಧಿಕ ಆದಾಯ: ರಾಹುಲ್ ಗಾಂಧಿ

ಹೊಸದಿಲ್ಲಿ: ಪೆಟ್ರೋಲ್, ಡೀಸೆಲ್ ಹಾಗೂ ಅಡುಗೆ ಅನಿಲದ ದತ್ತಾಂಶವನ್ನು ಉಲ್ಲೇಖಿಸಿ ಪೆಟ್ರೋಲ್ ಉತ್ಪನ್ನಗಳ ದರ ಏರಿಕೆ ಕುರಿತಾಗಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಇಂದು ಕೇಂದ್ರ ಸರಕಾರದ ವಿರುದ್ದ ವಾಗ್ದಾಳಿ ನಡೆಸಿದರು.
ಕಳೆದ ಏಳು ವರ್ಷಗಳಲ್ಲಿ, ಡೀಸೆಲ್, ಪೆಟ್ರೋಲ್ ಹಾಗೂ ಅಡುಗೆ ಅನಿಲ ಬೆಲೆ ಏರಿಕೆಯಿಂದಾಗಿ ಸರಕಾರವು 23 ಲಕ್ಷ ಕೋಟಿ ರೂ.ಗೂ ಹೆಚ್ಚು ಆದಾಯ ಗಳಿಸಿದೆ. ಈ ಎಲ್ಲವುಗಳಿಂದ ಒಟ್ಟಾದ ಹಣ ಹಾಗೂ ಸರಕು ಮತ್ತು ಸೇವಾ ತೆರಿಗೆ(ಜಿಎಸ್ ಟಿ)ಯಿಂದ ಬಂದ ಆದಾಯದಿಂದ “ಬೆರಳೆಣಿಕೆಯಷ್ಟು ಬಂಡವಾಳಶಾಹಿಗಳು ಪ್ರಯೋಜನ ಪಡೆಯುತ್ತಿದ್ದಾರೆ’’ ಎಂದು ರಾಹುಲ್ ಆರೋಪಿಸಿದರು.
"ಯುಪಿಎ ಸರಕಾರ ಕೇಂದ್ರದಲ್ಲಿ ಅಧಿಕಾರ ತೊರೆದಾಗ ಎಲ್‌ಪಿಜಿ ಸಿಲಿಂಡರ್ ಬೆಲೆ 410 ರೂ. ಆಗಿತ್ತು. ಇಂದು ಅದು 885 ರೂ. ಆಗಿದ್ದು 116 ಶೇಕಡಾ ಏರಿಕೆಯಾಗಿದೆ. 2014 ರಿಂದ ಪೆಟ್ರೋಲ್ ಬೆಲೆ 42 ಪ್ರತಿಶತ ಹೆಚ್ಚಾಗಿದೆ ಹಾಗೂ ಡೀಸೆಲ್ ಬೆಲೆ ಶೇಕಡಾ 55 ಕ್ಕಿಂತ ಹೆಚ್ಚು ಹೆಚ್ಚಳವಾಗಿದೆ"ಎಂದು ರಾಹುಲ್ ಗಾಂಧಿ ಹೇಳಿದರು.
Next Story





