ಕಾರ್ಕಳ: ಇಲಿ ಪಾಷಾಣದಲ್ಲಿ ಹಲ್ಲು ಉಜ್ಜಿದ್ದ ಮಹಿಳೆ ಮೃತ್ಯು!

ಸಾಂದರ್ಭಿಕ ಚಿತ್ರ
ಕಾರ್ಕಳ, ಸೆ.1: ಟೂತ್ಪೇಸ್ಟ್ ಬದಲು ಇಲಿ ಪಾಷಾಣದಲ್ಲಿ ಹಲ್ಲು ಉಜ್ಜಿದ ಪರಿಣಾಮ ತೀವ್ರವಾಗಿ ಅಸ್ವಸ್ಥಗೊಂಡ ಮಹಿಳೆಯೊಬ್ಬರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಮೃತರನ್ನು ಕಾರ್ಕಳ ಕಾಬೆಟ್ಟುವಿನ ಕಲಾವತಿ(61) ಎಂದು ಗುರುತಿಸಲಾಗಿದೆ. ಇವರು ಆ.20ರಂದು ಬೆಳಗ್ಗೆ ಮನೆಯಲ್ಲಿ ತಿಳಿಯದೇ ಟೂತ್ಪೇಸ್ಟ್ ಬದಲು ಇಲಿ ಪಾಷಾಣದಲ್ಲಿ ಹಲ್ಲು ಉಜ್ಜಿ ತೀವ್ರವಾಗಿ ಅಸ್ವಸ್ಥಗೊಂಡಿದ್ದರು. ಮಣಿಪಾಲ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಇವರು ಸೆ.1ರಂದು ಬೆಳಿಗ್ಗೆ 7ಗಂಟೆಗೆ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





