ಯಾದಗಿರಿ: ಕೋವಿಡ್ ನಿಯಮ ಉಲ್ಲಂಘಿಸಿ ಜಾತ್ರೆ; ದೂರು ದಾಖಲು

ಯಾದಗಿರಿ: ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕೋವಿಡ್ ನಿಯಮಗಳನ್ನು ಪಾಲಿಸುವಂತೆ ಸರಕಾರ ಸೂಚನೆ ನೀಡಿದ್ದರೂ ಕೋವಿಡ್ ನಿಯಮಗಳನ್ನು ಉಲ್ಲಂಘಿಸಿ ಸುರಪುರ ನಗರದ ವೇಣುಗೋಪಾಲಸ್ವಾಮಿ ದೇವಸ್ಥಾನದ ಜಾತ್ರೆಯಲ್ಲಿ ಮಾಸ್ಕ್ ಹಾಗೂ ಸುರಕ್ಷಿತ ಅಂತರ ಮರೆತು ಭಾರೀ ಸಂಖ್ಯೆಯಲ್ಲಿ ಜನ ಸೇರಿದ್ದು, ಜಾತ್ರಾ ಸಮಿತಿ ವಿರುದ್ಧ ದೂರು ದಾಖಲಾಗಿದೆ.
ಸುರಪುರ ವೇಣುಗೋಪಾಲ್ ಸ್ವಾಮಿ ದೇವಸ್ಥಾನದಲ್ಲಿ ಮಂಗಳವಾರದಂದು ಜಾತ್ರಾ ಸಮಿತಿಯವರು, ಕೋವಿಡ್ ನಿಯಮ ಇದ್ದರೂ ಸರ್ಕಾರದ ಆದೇಶಗಳನ್ನು ಉಲ್ಲಂಘಿಸಿ ಜಾತ್ರಾ ಕಾರ್ಯಕ್ರಮಗಳನ್ನು ನಡಿಸಿದ್ದು ಗಮನಕ್ಕೆ ಬಂದಿದೆ. ಇದರಿಂದ ಕರೋನ ಪ್ರಕರಣ ಹೆಚ್ಚಾಗುವ ಹಾಗೂ ರೋಗ ಹರಡುವ ಸಂಭವ ಇದ್ದ ಕಾರಣ, ಸಮಿತಿಯವರ ವಿರುದ್ಧ ಸುರಪುರ ಕಂದಾಯ ನಿರೀಕ್ಷಿಕರು ದೂರು ನೀಡಿದ್ದು, ಅದರಂತೆ ಸುರಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಯಾದಗಿರಿ ಎಸ್ಪಿ ಡಾ. ಸಿ.ಬಿ ವೇದಮೂರ್ತಿ ಮಾಹಿತಿ ನೀಡಿದ್ದಾರೆ.
Next Story





