ಅಜ್ಜಿನಡ್ಕ: ಅಂಗನವಾಡಿ ಕಟ್ಟಡ ನಿರ್ಮಿಸಲು ಮನವಿ
ಮಂಗಳೂರು, ಸೆ.1: ಕೋಟೆಕಾರ್ ಪಟ್ಟಣ ಪಂಚಾಯತ್ ವ್ಯಾಪ್ತಿಯ ಅಜ್ಜಿನಡ್ಕದಲ್ಲಿ ಅಂಗನವಾಡಿ ಕಟ್ಟಡ ನಿರ್ಮಿಸಲು ಮತ್ತು ಅಂಗನವಾಡಿ ಕಾರ್ಯಕರ್ತೆಯರನ್ನು ನೇಮಿಸಬೇಕು ಎಂದು ಕೋಟೆಕಾರ್ ಗ್ರಾಪಂ ಮಾಜಿ ಸದಸ್ಯ ಹಾಗೂ ಅಂಗನವಾಡಿ ಬಾಲ ವಿಕಾಸ ಸಮಿತಿಯ ಸದಸ್ಯ ಅಹ್ಮದ್ ಅಜ್ಜಿನಡ್ಕ ಮನವಿ ಮಾಡಿದ್ದಾರೆ.
ಅಜ್ಜಿನಡ್ಕದಲ್ಲಿ ಅಂಗನವಾಡಿ ಆರಂಭವಾಗಿ ಹದಿನೈದು ವರ್ಷಗಳು ಕಳೆದಿವೆ. ಈವರೆಗೂ ಮದ್ರಸ ಕಟ್ಟಡ ದಲ್ಲಿ ಅಂಗನವಾಡಿ ನಡೆಯುತ್ತಿದೆ. ಯಾವುದೇ ಮೂಲ ಸೌಕರ್ಯವಿಲ್ಲದ ಕಾರಣ ಮಕ್ಕಳಿಗೆ ತುಂಬಾ ತೊಂದರೆಯಾಗಿದೆ. ಅಂಗನವಾಡಿ ನಿರ್ಮಿಸಲು ಸ್ಥಳೀಯರಾದ ಯು.ಎನ್. ಅಬ್ದುಲ್ಲಾ 2 ಸೆಂಟ್ಸ್ ಸ್ಥಳ ದಾನವಾಗಿ ನೀಡಿದ್ದಾರೆ. ಅದು ಇಲಾಖೆಯಲ್ಲಿ ನೋಂದಣಿಯೂ ಆಗಿದೆ. ಹಾಗಾಗಿ ಈ ಅಂಗನವಾಡಿಗೆ ಸ್ವಂತ ಕಟ್ಟಡ ನಿರ್ಮಿಸಬೇಕು. ಅಲ್ಲದೆ ಈ ಅಂಗನವಾಡಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಕಾರ್ಯಕರ್ತೆ ಅನಾರೋಗ್ಯದಿಂದ ರಾಜೀನಾಮೆ ನೀಡಿದ್ದು, ಹುದ್ದೆ ಖಾಲಿ ಇದೆ. ಹಾಗಾಗಿ ಸೂಕ್ತ ಕ್ರಮ ಜರುಗುಸುವಂತೆ ಒತ್ತಾಯಿಸಿದ್ದಾರೆ.
Next Story





