ರೆಡ್‌ಕ್ರಾಸ್ ಸಂಸ್ಥೆಯ ಸದಸ್ಯತ್ವ ಫಲಕ ಹಸ್ತಾಂತರ

ಮಂಗಳೂರು, ಸೆ.1: ಭಾರತೀಯ ರೆಡ್‌ಕ್ರಾಸ್ ಸಂಸ್ಥೆಯ ದ.ಕ.ಜಿಲ್ಲಾ ಸಮಿತಿಗೆ ಪೋಷಕ ಸದಸ್ಯರಾಗಿ ಸೇರ್ಪಡೆಗೊಂಡ ಸೌದಿ ಅರೇಬಿಯಾ ಉದ್ಯಮಿ ಬಿ.ಎಂ.ಶರೀಫ್ ಅವರಿಗೆ ಸದಸ್ಯತ್ವ ಫಲಕವನ್ನು ರೆಡ್‌ಕ್ರಾಸ್ ಸಂಸ್ಥೆಯ ಅಧ್ಯಕ್ಷರೂ ಆದ ದ.ಕ.ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ. ಹಸ್ತಾಂತರಿಸಿದರು.
ರೆಡ್‌ಕ್ರಾಸ್‌ನ ಸಮಾಜಮುಖಿ ಕೆಲಸವನ್ನು ಗಮನಿಸಿದ ಬಿ.ಎಂ.ಶರೀಫ್ ತನ್ನ ಜೊತೆಗೆ ಕುಟುಂಬದ ಎಲ್ಲಾ ಸದಸ್ಯರನ್ನು ರೆಡ್‌ಕ್ರಾಸ್ ಸದಸ್ಯರನ್ನಾಗಿ ಸೇರ್ಪಡೆಗೊಳಿಸಿದರು. ಈ ಸಂದರ್ಭ ಬಿ.ಎಂ.ಶರೀಫ್‌ರ ಪುತ್ರಿ ಸಲ್ಮಾ ಶಮಾ, ರೆಡ್‌ಕ್ರಾಸ್‌ನ ಗೌರವ ಕಾರ್ಯದರ್ಶಿ ಎಸ್.ಎ.ಪ್ರಭಾಕರ ಶರ್ಮಾ,ಜಿಲ್ಲಾ ಸಮಿತಿ ಸದಸ್ಯ ರವೀಂದ್ರನಾಥ್,ಜಿಲ್ಲಾ ಸಂಯೋಜಕ ಪ್ರವೀಣ್ ಕುಮಾರ್,ಪತ್ರಕರ್ತ ಸುಖಪಾಲ್ ಪೊಳಲಿ, ಅಲ್ ಅಮೀನ್ ಬ್ಲಡ್ ಡೋನರ್ ಸಂಸ್ಥೆಯ ಮುಹಮ್ಮದ್ ಹರ್ಷದ್, ಉದ್ಯಮಿ ಅಲ್ತಾಫ್ ಉಪಸ್ಥಿತರಿದ್ದರು.
Next Story





