ಬಲ್ಮಠದಲ್ಲಿ ಮರ ಉರುಳಿ ಕಾರು ಜಖಂ
![ಬಲ್ಮಠದಲ್ಲಿ ಮರ ಉರುಳಿ ಕಾರು ಜಖಂ ಬಲ್ಮಠದಲ್ಲಿ ಮರ ಉರುಳಿ ಕಾರು ಜಖಂ](https://www.varthabharati.in/sites/default/files/images/articles/2021/09/2/305018-1630591773.jpeg)
ಮಂಗಳೂರು, ಸೆ.2: ನಗರದ ಬಲ್ಮಠದ ರೂಪಾ ಹೊಟೇಲ್ ಸಮೀಪದಲ್ಲಿ ರಸ್ತೆ ಬದಿಯಲ್ಲಿ ಪಾರ್ಕಿಂಗ್ ಮಾಡಲಾಗಿದ್ದ ಕಾರಿನ ಮೇಲೆ ಮರ ಉರುಳಿ ಬಿದ್ದ ಘಟನೆ ಗುರುವಾರ ಸಂಜೆ ನಡೆದಿದೆ.
ಪಾರ್ಕ್ ಮಾಡಲಾಗಿದ್ದ ಕಾರಿನ ಮೇಲೆ ಮರ ಉರುಳಿ ಬಿದ್ದಿದೆ. ಪರಿಣಾಮ ಕಾರು ಜಖಂಗೊಂಡಿದೆ. ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ತಿಳಿದುಬಂದಿದೆ.
ಘಟನೆಯು ಇಂದು ಸಂಜೆ 5:45ರ ಸುಮಾರಿಗೆ ನಡೆದಿದೆ. ವಿಷಯ ತಿಳಿದ ತಕ್ಷಣ ಪಾಂಡೇಶ್ವರ ಅಗ್ನಿಶಾಮಕ ದಳ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ, ಮರ ತೆರವುಗೊಳಿಸಿದರು.
![](https://www.varthabharati.in/sites/default/files/images/galllery/2021/09/2/WhatsApp Image 2021-09-02 at 5.57.04 PM.jpeg)
Next Story