ಮದ್ರಸ ಕುರಿತು ಹೇಳಿಕೆ : ಜಮೀಯ್ಯತುಲ್ ಮುಅಲ್ಲಿಮೀನ್ ಖಂಡನೆ
ಮಂಗಳೂರು, ಸೆ.2: ಶಾಂತಿ, ಸೌಹಾರ್ದ, ದೇಶ ಪ್ರೇಮವನ್ನು ಬೋಧಿಸುವ ಮದ್ರಸಗಳ ಕುರಿತು ತಾಲಿಬಾನಿಗಳನ್ನು ಸೃಷ್ಟಿಸುವ ಕೇಂದ್ರ ಎಂಬ ಹೇಳಿಕೆಯನ್ನು ದ.ಕ. ಜಿಲ್ಲಾ ಜಮೀಯ್ಯತುಲ್ ಮುಅಲ್ಲಿಮೀನ್ ಖಂಡಿಸಿದೆ.
ಸಮಾಜದಲ್ಲಿ ಸೌಹಾರ್ದ, ಸಾಮರಸ್ಯವನ್ನು ಕಾಪಾಡಲು ಪ್ರತಿಜ್ಞೆಗೈಯುವ ಜನಪ್ರತಿನಿಧಿಗಳು ಇಂತಹ ಬಾಲಿಶ ಹೇಳಿಕೆ ನೀಡುವುದು ಅಸಮಂಜಸ. ಇಸ್ಲಾಂ ತೆರೆದ ಪುಸ್ತಕವಾಗಿದೆ. ಅಧ್ಯಯನ ನಡೆಸಲು ಸಾಕಷ್ಟು ಸೌಕರ್ಯಗಳಿವೆ. ಪ್ರಕೃತಿ ವಿಕೋಪಗಳು ಬಂದಾಗ ಸಂತ್ರಸ್ತರ ಜಾತಿ ನೋಡದೆ ಆಶ್ರಯ ನೀಡಿದ ನಿದರ್ಶನ ನಮ್ಮ ಮುಂದಿರುವಾಗ ಶಾಂತಿ ಕದಡುವ ಇಂತಹ ಮಾತುಗಳನ್ನು ಸಮಾಜ ಅಂಗೀಕರಿಸುವುದಿಲ್ಲ. ಸಿ.ಟಿ. ರವಿ ತಮ್ಮ ಹೇಳಿಕೆಯನ್ನು ಹಿಂದೆಗೆದುಕೊಂಡು ಕ್ಷಮೆ ಕೇಳಬೇಕೆಂದು ಜಿಲ್ಲಾ ಜಮೀಯ್ಯತುಲ್ ಮುಅಲ್ಲಿಮೀನ್ ಅಧ್ಯಕ್ಷ ಅಬ್ದುಲ್ಲತೀಫ್ ದಾರಿಮಿ ರೆಂಜಾಡಿ ಹಾಗೂ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಮುಸ್ಲಿಯಾರ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Next Story





