ಲಂಚ ಪ್ರಕರಣ: ಸಬ್ ಇನ್ಸ್ಪೆಕ್ಟರ್, ಅನಿಲ್ ದೇಶ್ಮುಖ್ ವಕೀಲರ ಬಂಧನ
ಹೊಸದಿಲ್ಲಿ, ಸೆ. 2: ಮಹಾರಾಷ್ಟ್ರದ ಮಾಜಿ ಸಚಿವ ಹಾಗೂ ನ್ಯಾಷನಲ್ ಕಾಂಗ್ರೆಸ್ ಪಕ್ಷದ ನಾಯಕ ಅನಿಲ್ ದೇಶಮುಖ್ ಅವರ ವಕೀಲ ಹಾಗೂ ತನ್ನದೇ ಓರ್ವ ಸಬ್ ಇನ್ಸ್ಪೆಕ್ಟರ್ ಅನ್ನು ಸಿಬಿಐ ಗುರುವಾರ ಬಂಧಿಸಿದೆ. ತನ್ನ ಪರವಾಗಿ ಲಂಚ ಸಂಗ್ರಹಿಸುವಂತೆ ಪೊಲೀಸ್ ಅಧಿಕಾರಿಗೆ ದೇಶಮುಖ್ ಬಲವಂತಪಡಿಸಿರುವ ಆರೋಪದ ತನಿಖೆಯ ಭಾಗವಾಗಿ ಈ ಬಂಧನ ನಡೆದಿದೆ.
ದೇಶ್ಮುಖ್ ಅವರ ವಕೀಲ ಆನಂದ್ ದಾಗ ಅವರು ಸಿಬಿಐ ಅಧಿಕಾರಿಗೆ ಲಂಚ ನಿಡಿರುವುದು ತನಿಖೆಯಲ್ಲಿ ಪತ್ತೆಯಾದ ಬಳಿಕ ಈ ಬಂಧನ ನಡೆದಿದೆ. ಅಕ್ರಮ ಓಲೈಕೆಗೆ ಸಂಬಂಧಿಸಿ ದಾಗಾ, ಸಬ್ ಇನ್ಸ್ಪೆಕ್ಟರ್ ಅಭಿಷೇಕ್ ತೀವಾರಿ ಹಾಗೂ ಇತರ ಇಬ್ಬರು ಅನಾಮಿಕ ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಸಿಬಿಐ ಬುಧವಾರ ಹೇಳಿತ್ತು. ದಾಗಾ ಅವರನ್ನು ಬುಧವಾರ ವಿಚಾರಣೆ ನಡೆಸಲಾಗಿತ್ತು. ಇಂದು ಬಂಧಿಸಲಾಗಿದೆ. ಪ್ರಕರಣದ ಪ್ರಾಥಮಿಕ ತನಿಖೆ ಸಂದರ್ಭ ತನಿಖಾಧಿಕಾರಿಗೆ ವಕೀಲರು ಲಂಚ ನೀಡಿರುವುದಕ್ಕೆ ಪುರಾವೆ ಇದೆ. ತನಿಖೆ ಮುಂದುವರಿದಿದೆ ಎಂದು ಸಿಬಿಐ ಹೇಳಿದೆ.
Next Story





