ಮೈಸೂರು: ಜಿಲ್ಲಾಧಿಕಾರಿಗಳ ಸಭೆಗೆ ಮಾಸ್ಕ್ ಧರಿಸದೆ ಬಂದಿದ್ದ ಅಧಿಕಾರಿಗೆ 250 ರೂ. ದಂಡ

ಸಾಂದರ್ಭಿಕ ಚಿತ್ರ
ಮೈಸೂರು,ಸೆ.2: ಕೊರೋನ ನಿಯಂತ್ರಣ ಸಂಬಂಧ ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಅವರು ಕರೆದಿದ್ದ ಸಭೆಗೆ ಮಾಸ್ಕ್ ಧರಿಸದೆ ಬಂದಿದ್ದ ಅಧಿಕಾರಿಯೊಬ್ಬರಿಗೆ 250 ರೂ. ದಂಡ ವಿಧಿಸಲಾಗಿದೆ.
ಜಿಲ್ಲಾಡಳಿತದಿಂದ ಕೋವಿಡ್ ನಿಯಂತ್ರಣ ಸಂಬಂಧ ಅಧಿಕಾರಿಗಳ ಸಭೆಯಲ್ಲಿ ಕರೆಯಲಾಗಿತ್ತು. ಸಭೆಗೆ ಬರುವವರು ಮಾಸ್ಕ್ ಕಡ್ಡಾಯ, ಸಾರ್ವಜನಿಕ ಅಂತ ಪಾಲನೆ ಮಾಡುವಂತೆ ಸೂಚನೆಯೂ ನೀಡಲಾಗಿತ್ತು. ಆದರೆ, ಸಭೆಗೆ ಕಡಕೊಳ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಮಾಸ್ಕ್ ಧರಿಸದೆ ಸಭೆಗೆ ಹಾಜರಾಗಿದ್ದರು. ಇದನ್ನು ಕಂಡ ಅಧಿಕಾರಿಗಳು ಅವರಿಗೆ ತರಾಟೆಗೆ ತೆಗೆದುಕೊಂಡು ಮಾಸ್ಕ್ ಧರಿಸುವಂತೆ ಸೂಚಿಸಿದರು.
ನಂತರ ಕೊರೋನ ನಿಯಂತ್ರಣ ಸಂಬಂಧ ಕೋವಿಡ್ ನಿಯಮಾವಳಿಗಳನ್ನು ಉಲ್ಲಂಘಸಿದ್ದೀರಿ ಎಂದು ಮಾಸ್ಕ್ ಧರಿದೆ ಸಭೆಗೆ ಆಗಮಿಸಿದ್ದ ಅಧಿಕಾರಿಗೆ 250 ರೂ. ದಂಡ ವಿಧಿಸಲಾಯಿತು.
Next Story





