ತಿಪಟೂರು: ಜ್ಯೋತಿಬಾ ಫುಲೆ, ಸಾವಿತ್ರಿಬಾಯಿ ಫುಲೆ ಮತ್ತು ಫಾತಿಮಾ ಶೇಖ್ ಹೆಸರಿನಲ್ಲಿ 'ಸ್ಕಾಲರ್ಶಿಪ್'
ತಿಪಟೂರು: ಕೋವಿಡ್ ನಿಂದ ಪೋಷಕರನ್ನು ಕಳೆದುಕೊಂಡ ತಿಪಟೂರಿನ ವಿದ್ಯಾರ್ಥಿಗಳ ನೆರವಿಗಾಗಿ 'ಜನಸ್ಪಂದನ ಟ್ರಸ್ಟ್' ಎರಡು ವರ್ಷಗಳಲ್ಲಿ 10 ಲಕ್ಷ ರೂ. ಮೀಸಲಿರಿಸಿದ್ದು, ಈ ಸಾಲಿನಲ್ಲಿ ವಿದ್ಯಾರ್ಥಿಗಳಿಗೆ 5 ಲಕ್ಷ ರೂ. ಸ್ಕಾಲರ್ಶಿಪ್ ನೀಡಲಾಗುತ್ತಿದೆ ಎಂದು ಪ್ರಕಟನೆ ತಿಳಿಸಿದೆ.
ವಿದ್ಯಾರ್ಥಿನಿಯರಿಗೆ ಹಾಗೂ ಹಿಂದುಳಿದವರಿಗೆ ಸಮಾನ ಶಿಕ್ಷಣ ದೊರೆಯಬೇಕು ಎಂದು ಹೋರಾಡಿದ ಜ್ಯೋತಿಬಾ ಫುಲೆ, ಸಾವಿತ್ರಿ ಬಾಯಿ ಫುಲೆ ಮತ್ತು ಫಾತಿಮಾ ಶೇಖ್ ಹೆಸರಿನಲ್ಲಿ ಸ್ಕಾಲರ್ಶಿಪ್ ನೀಡಲು ಮುಂದಾಗಿದೆ.
2021ನೇ ಸಾಲಿನ ಫಲಾನುಭವಿ ವಿದ್ಯಾರ್ಥಿಗಳಿಗೆ ಸ್ಕಾಲರ್ಶಿಪ್ ಪ್ರದಾನ ಸಮಾರಂಭವು ಸೆ. 5ರಂದು ಬೆಳಗ್ಗೆ 11 ಗಂಟೆಗೆ ತಿಪಟೂರಿನ ಬಿ.ಎಚ್.ರಸ್ತೆ, ರೋಟರಿ ಭವನದ ಹತ್ತಿರ ಇರುವ ಪಲ್ಲಾಗಟ್ಟಿ ಲೇಔಟ್‍ನಲ್ಲಿ ನಡೆಯಲಿದೆ ಎಂದು ಜನಸ್ಪಂದನ ಟ್ರಸ್ಟ್ ಅಧ್ಯಕ್ಷರು ಹಾಗೂ ತಿಪಟೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಮುಖಂಡರಾದ ಶಶಿಧರ್ ಸಿ.ಬಿ (ಟೂಡಾ) ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Next Story





