ಉಡುಪಿ : 'ಹೊಲಿಸ್ಟಿಕ್ ವೆಲ್ ಬೀಯಿಂಗ್' ವ್ಯಾಯಾಮ ಹಾಗು ಆರೋಗ್ಯ ತರಬೇತಿ ಕೇಂದ್ರ ಶುಭಾರಂಭ

ಉಡುಪಿ, ಸೆ. 3: ನಗರದ ಸಿಟಿ ಸೆಂಟರ್‌ನ 4ನೆ ಮಹಡಿಯಲ್ಲಿ 'ಹೊಲಿಸ್ಟಿಕ್ ವೆಲ್ ಬೀಯಿಂಗ್' ವ್ಯಾಯಾಮ ಹಾಗು ಆರೋಗ್ಯ ತರಬೇತಿ ಕೇಂದ್ರ ಇತ್ತೀಚೆಗೆ ಶುಭಾರಂಭಗೊಂಡಿತು.
ಅಧ್ಯಕ್ಷತೆಯನ್ನು ಕಾರ್ಯಾಗಾರದ ಮಾರ್ಗದರ್ಶಕರಾಗಿರುವ ಶೇಕ್ ಅಬ್ದುಲ್ ಲತೀಫ್ ಮದನಿ ವಹಿಸಿದ್ದರು. ಮಣಿಪಾಲ ಮಸೀದಿಯ ಇಮಾಮ್ ಮೌಲಾನ ಸಾದಿಕ್ ಅಜ್ಮಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಮುಖ್ಯ ಅತಿಥಿಯಾಗಿ ಯುವಜನ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಡಾ.ರೋಶನ್ ಕುಮಾರ್ ಶೆಟ್ಟಿ ಮಾತನಾಡಿದರು. ಮಣಿಪಾಲದ ಕೆಎಂಸಿ ಸಹ ಪ್ರಾಧ್ಯಾಪಕ ಡಾ. ಕಿಶನ್, ಸಾಲಿಹಾತ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ.ಶಾನವಾಝ್, ಉದ್ಯಮಿಗಳಾದ ಸುಹೈಲ್ ಹಾಗೂ ಜಮಾಲುದ್ದೀನ್ ಮುಖ್ಯ ಅಥಿತಿಗಳಾಗಿದ್ದರು.
ತರಬೇತುದಾರ ರಿಝ್ವಾನ್ ಅಬ್ದುಲ್ ರಹ್ಮಾನ್ ಕಾರ್ಯಾಗಾರದ ಉದ್ದೇಶ, ಪ್ರಯೋಜನ ಹಾಗೂ ಸ್ವರೂಪದ ಬಗ್ಗೆ ಮಾಹಿತಿ ನೀಡಿದರು. ಫಯಾಝ್ ಅಹ್ಮದ್ ಕಾರ್ಯಕ್ರಮ ನಿರೂಪಿಸಿದರು.
Next Story









