ಪ್ಯಾರಾಲಿಂಪಿಕ್ಸ್:ಕಂಚಿಗೆ ಗುರಿ ಇಟ್ಟ ಬಿಲ್ಲುಗಾರ ಹರ್ವೀಂದರ್ ಸಿಂಗ್

photo: twitter
ಟೋಕಿಯೊ: ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಶುಕ್ರವಾರ ಹರ್ವೀಂದರ್ ಸಿಂಗ್ ಅವರು ಕೊರಿಯಾದ ಕಿಮ್ ಮಿನ್ ಸು ಅವರನ್ನು ಸೋಲಿಸಿ ಆರ್ಚರಿಯ ಪುರುಷರ ವೈಯಕ್ತಿಕ ರಿಕರ್ವ್ ಓಪನ್ ಸ್ಪರ್ಧೆಯಲ್ಲಿ ಕಂಚಿನ ಪದಕ ಗೆದ್ದರು.
ಕೊರಿಯಾ ಬಿಲ್ಲುಗಾರನ ವಿರುದ್ಧ ಶೂಟ್ ಆಫ್ ನಲ್ಲಿ ರೋಚಕ ಜಯ ಸಾಧಿಸಿರುವ ಸಿಂಗ್ ಪ್ಯಾರಾ ಆರ್ಚರಿಯಲ್ಲಿ ಪದಕ ಜಯಿಸಿದ ಭಾರತದ ಮೊದಲ ಪ್ಯಾರಾ ಅತ್ಲೀಟ್ ಎಂಬ ಹಿರಿಮೆಯೊಂದಿಗೆ ಇತಿಹಾಸ ನಿರ್ಮಿಸಿದರು. ಭಾರತವು ಶುಕ್ರವಾರ ಮೂರನೇ ಪದಕವನ್ನು ಗೆದ್ದುಕೊಂಡಿದೆ.
ಇಂದು ಪ್ರವೀಣ್ ಕುಮಾರ್(ಹೈಜಂಪ್, ಬೆಳ್ಳಿ)ಹಾಗೂ ಅವನಿ (ಶೂಟಿಂಗ್)ಕಂಚಿನ ಪದಕ ಜಯಿಸಿದ್ದರು.
Next Story