ಕೇವಿಡ್ ತಪಾಸಣೆಗಾಗಿ 14 ಚೆಕ್‌ಪೋಸ್ಟ್ ಗಳು: ಉಡುಪಿ ಎಸ್ಪಿ
ಉಡುಪಿ, ಸೆ. 3: ಜಿಲ್ಲೆಗೆ ಕೇರಳ ಮತ್ತು ಮಹಾರಾಷ್ಟ್ರದಿಂದ ಬರುವವರ ತಪಾಸಣೆಗಾಗಿ ಜಿಲ್ಲೆಯಲ್ಲಿ ಈಗಾಗಲೇ ಎಂಟು ಚೆಕ್ ಪೋಸ್ಟ್ ಗಳಿದ್ದು, ವಾರಾಂತ್ಯ ಕರ್ಫ್ಯೂ ಸಂದರ್ಭದಲ್ಲಿ ಇನ್ನೂ ಆರು ಚೆಕ್ ಪೋಸ್ಟ್ ಗಳನ್ನು ಪ್ರಾರಂಭಿಸಲಾಗುವುದು ಎಂದು ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ್ ಹೇಳಿದ್ದಾರೆ.
ಜಿಲ್ಲಾಧಿಕಾರಿಯವರೊಂದಿಗೆ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದ ಅವರು, ಇಂದು ರಾತ್ರಿ 9 ರಿಂದ ಸೋಮವಾರ 5 ರ ತನಕ ವೀಕೆಂಡ್ ಕರ್ಫ್ಯೂ ಜಾರಿಯಲ್ಲಿರಲಿದೆ. ವೀಕೆಂಡ್ ಕರ್ಪ್ಯೂ ಅವಧಿಯಲ್ಲಿ ತಪಾಸಣೆಗಾಗಿ ಪೊಲೀಸ ರನ್ನು ನಿಯೋಜಿಸಲಾಗಿದೆ ಎಂದರು.
ಮಾಸ್ಕ್ ಮತ್ತು ಸುರಕ್ಷತಾ ಅಂತರ ಕಾಪಾಡದವರಿಗೆ ದಂಡ ಹಾಕುವ ಪ್ರಕ್ರಿಯೆ ಮುಂದುವರೆಯಲಿದೆ. ಚೆಕ್‌ಪೋಸ್ಟ್ ಗಳಲ್ಲಿ ಕೂಡ ತಪಾಸಣೆಯನ್ನು ಬಿಗಿ ಗೊಳಿಸುತ್ತೇವೆ ಎಂದರು.
Next Story





