ನಾಲ್ಕನೇ ಟೆಸ್ಟ್: ಭಾರತ ವಿರುದ್ಧ ಇಂಗ್ಲೆಂಡ್ 290 ರನ್ ಗೆ ಆಲೌಟ್
ಓಲೀ ಪೋಪ್, ವೋಕ್ಸ್ ಅರ್ಧಶತಕ, ಮಿಂಚಿದ ಉಮೇಶ್ ಯಾದವ್, ಬುಮ್ರಾ

photo: twitter
ಲೀಡ್ಸ್: ವೇಗದ ಬೌಲರ್ ಗಳಾದ ಉಮೇಶ್ ಯಾದವ್(3-76), ಜಸ್ ಪ್ರೀತ್ ಬುಮ್ರಾ(2-67) ಹಾಗೂ ಸ್ಪಿನ್ನರ್ ರವೀಂದ್ರ ಜಡೇಜ(2-36) ಅವರ ಕರಾರುವಾಕ್ ಬೌಲಿಂಗ್ ನೆರವಿನಿಂದ ಭಾರತವು ನಾಲ್ಕನೇ ಟೆಸ್ಟ್ ಪಂದ್ಯದ 2ನೇ ದಿನವಾದ ಶುಕ್ರವಾರ ಆತಿಥೇಯ ಇಂಗ್ಲೆಂಡ್ ಕ್ರಿಕೆಟ್ ತಂಢವನ್ನು ಮೊದಲ ಇನಿಂಗ್ಸ್ ನಲ್ಲಿ 290 ರನ್ ಗೆ ನಿಯಂತ್ರಿಸಿದೆ. ಆದಾಗ್ಯೂ ಇಂಗ್ಲೆಂಡ್ 99 ರನ್ ಮುನ್ನಡೆ ಪಡೆಯುವಲ್ಲಿ ಯಶಸ್ವಿಯಾಗಿದೆ.
ಓಲೀ ಪೋಪ್ (81) ಹಾಗೂ ಕ್ರಿಸ್ ವೋಕ್ಸ್(50) ಅರ್ಧಶತಕದ ಕೊಡುಗೆ ನೀಡಿದ್ದು ಇಂಗ್ಲೆಂಡ್ 84 ಓವರ್ ಗಳಲ್ಲಿ 290 ರನ್ ಗಳಿಸಿ ಆಲೌಟಾಯಿತು. ವೋಕ್ಸ್ ರನೌಟ್ ಆಗುವುದರೊಂದಿಗೆ ಇಂಗ್ಲೆಂಡ್ ನ ಮೊದಲ ಇನಿಂಗ್ಸ್ ಗೆ ತೆರೆ ಬಿತ್ತು.
ಗುರುವಾರ ಭಾರತವನ್ನು ಮೊದಲ ಇನಿಂಗ್ಸ್ ನಲ್ಲಿ 191 ರನ್ ಗೆ ನಿಯಂತ್ರಿಸಿ ಬ್ಯಾಟಿಂಗ್ ಆರಂಭಿಸಿದ್ದ ಇಂಗ್ಲೆಂಡ್ ನಿರೀಕ್ಷಿತ ಆರಂಭ ಪಡೆಯಲಿಲ್ಲ. ಇನಿಂಗ್ಸ್ ಆರಂಭಿಸಿದ ರೋರಿ ಬರ್ನ್ಸ್(5) ಹಾಗೂ ಹಸೀಬ್ ಹಮೀದ್ (0)ಬುಮ್ರಾ ಬೌಲಿಂಗ್ ಗೆ ಉತ್ತರಿಸಲಾಗದೆ ಬೇಗನೆ ಪೆವಿಲಿಯನ್ ಸೇರಿದರು.
ಕ್ರೆಗ್ ಓವರ್ಟನ್ 1 ರನ್ ಗಳಿಸಿದರು. ಡೇವಿಡ್ ಮಲಾನ್ (31), ನಾಯಕ ಜೋ ರೂಟ್ (21), ವಿಕೆಟ್ ಕೀಪರ್ ಬೈರ್ ಸ್ಟೋವ್(37), ಆಲ್ ರೌಂಡರ್ ಮೊಯಿನ್ ಅಲಿ(35) ದೊಡ್ಡ ಮೊತ್ತ ಗಳಿಸಲು ವಿಫಲರಾದರು. ಓಲೀ ಪೋಪ್ (81 ರನ್,159 ಎಸೆತ, 6 ಬೌಂಡರಿ)ತಾಳ್ಮೆಯ ಬ್ಯಾಟಿಂಗ್ ನಿಂದ ತಂಡದ ಮೊತ್ತವನ್ನು 250ಕ್ಕೆ ತಲುಪಿಸಿದರು.