ಶಿವಮೊಗ್ಗ : ಲಕ್ಷಾಂತರ ಮೌಲ್ಯದ ಶ್ರೀಗಂಧ ವಶಕ್ಕೆ ಪಡೆದ ಪೊಲೀಸರು
ಶಿವಮೊಗ್ಗ (ಸೆ.03): ಕಾರಿನಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಲಕ್ಷಾಂತರ ಮೌಲ್ಯದ ಶ್ರೀಗಂಧ ಮರದ ತುಂಡುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಶುಕ್ರವಾರ ಬೆಳಗ್ಗೆ ಅಪರಿಚಿತರಿಬ್ಬರು ಅಕ್ರಮವಾಗಿ ಲೈಸೆನ್ಸ್ ಇಲ್ಲದೆ ಶ್ರೀಗಂಧ ಸಾಗಾಟ ಮಾಡುತ್ತಿದ್ದಾಗ ಖಚಿತ ಮಾಹಿತಿ ಮೇರೆಗೆ ಶಿರಾಳಕೊಪ್ಪ ಪೊಲೀಸರು ಚಿಕ್ಕಜಂಬೂರಿನ ಬಳಿ ದಾಳಿ ಮಾಡಿ ಮಾಲು ಸಮೇತ ಆರೋಪಿಯೊಬ್ಬನ್ನು ಬಂದಿಸಿದ್ದಾರೆ.
ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ನೀಡಿ, ಅವರು ಬಂದ ನಂತರ ಶ್ರೀಗಂಧ ಎಂದು ದೃಢ ಪಡಿಸಿಕೊಂಡು, 69 ಕೆಜಿ 30 ಗ್ರಾಂ ಇರುವುದಾಗಿ ತಿಳಿದು ಬಂದಿದೆ. ಶಿಕಾರಿಪುರ ತಾಲೂಕಿನ ಚಿಕ್ಕಜಂಬೂರಿನ ಖಲಂದರ್ ಖಾನ್ (35) ನನ್ನು ಆರೋಪಿಯನ್ನು ವಶಕ್ಕೆ ಪಡೆಯಲಾಗಿದ್ದು, ಅದೇ ಗ್ರಾಮದ ತಾಹೀರ್ ಬೇಗ್ 40 ತಲೆ ಮರೆಸಿಕೊಂಡಿದ್ದಾನೆAದು ತಿಳಿದು ಬಂದಿದೆ.
ಇವರ ವಿರುದ್ಧ ಶಿರಾಳಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





