ಚಿನ್ನಾಭರಣ ತೊಳೆಯುವ ನೆಪದಲ್ಲಿ ಮೋಸ
ಉಡುಪಿ, ಸೆ.3: ಚಿನ್ನಾಭರಣ ತೊಳೆದು ಕೊಡುವ ನೆಪದಲ್ಲಿ ಸಾವಿರಾರು ರೂ. ಮೌಲ್ಯದ ಚಿನ್ನಾಭರಣ ಕಳವು ಮಾಡಿಕೊಂಡು ಹೋಗಿರುವ ಘಟನೆ ಸೆ.2ರಂದು ಮಧ್ಯಾಹ್ನ ಚಿಟ್ಪಾಡಿ ಕಸ್ತೂರ್ಬಾ ನಗರದ ಕಂಬಳಕಟ್ಟ ಎಂಬಲ್ಲಿ ನಡೆದಿದೆ.
ಜಲಜ ಎಂ.ಪೂಜಾರಿ (60) ಎಂಬವರ ಮನೆಗೆ ಸುಮಾರು 40 ರಿಂದ 45 ವರ್ಷ ಪ್ರಾಯದ ಓರ್ವ ಅಪರಿಚಿತ ವ್ಯಕ್ತಿ ಬಂದು ಚಿನ್ನದ ಆಭರಣ ಗಳನ್ನು ತೊಳೆದು ಕೊಡುವುದಾಗಿ ಹೇಳಿದನು. ಅದರಂತೆ ಜಲಜ ಕುತ್ತಿಗೆಯಲ್ಲಿದ್ದ ಚಿನ್ನದ ಸರವನ್ನು ನೀಡಿದ್ದರು. ಈ ವೇಳೆ ಆತ 3 ಪವನ್ ಚಿನ್ನದ ಸರವನ್ನು ಮೋಸದಿಂದ ತೆಗೆದುಕೊಂಡು ಹೋಗಿದ್ದು, ಇದರ ಮೌಲ್ಯ 96,000ರೂ. ಎಂದು ಅಂದಾಜಿಸಲಾಗಿದೆ.
ಈ ಬಗ್ಗೆ ಉಡುಪಿ ನಗರ ಪೊಲೀ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





