ಯೆನೆಪೊಯ ಕಾಲೇಜಿಗೆ ನುಗ್ಗಿ ನಗದು ಕಳವು: ದೂರು
ಮಂಗಳೂರು, ಸೆ.3: ಯೆನೆಪೊಯ ಶಾಲೆ ಮತ್ತು ಪದವಿ ಪೂರ್ವ ಕಾಲೇಜಿಗೆ ನುಗ್ಗಿರುವ ಕಳ್ಳರು ನಗದು ಕಳವುಗೈದ ಘಟನೆ ನಡೆಯಿತು.
ಅಕೌಂಟೆಂಟ್ ಮಂಜುಪ್ರಸಾದ್ ಕೆ.ಆರ್. ಆ.31ರಂದು ಸಂಜೆ 4 ಗಂಟೆಗೆ ಆನಂದ ಎಂಬವರೊಂದಿಗೆ ಶಾಲೆಯ ಕೆಲಸ ಮುಗಿಸಿ ಮನೆಗೆ ತೆರಳಿ ದ್ದರು. ಸೆ.1ರಂದು ರಾತ್ರಿ 12:30ರ ವೇಳೆಗೆ ಯಾರೋ ಕಳ್ಳರು ನುಗ್ಗಿ ಬೀಗ ಮುರಿದು ಬಾಗಿಲು ತೆರೆದು ಡ್ರಾವರ್ ಒಡೆದು ಅದರಲ್ಲಿದ್ದ 44,046 ರೂ. ಕಳವು ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಈ ಬಗ್ಗೆ ಕಂಕನಾಡಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





