ಉಳ್ಳಾಲ: ಸಸಿ ನೆಡುವ ಕಾರ್ಯಕ್ರಮ

ಉಳ್ಳಾಲ: ಉಳ್ಳಾಲ ಜುಮಾ ಮಸೀದಿ ಹಾಗೂ ಸಯ್ಯದ್ ಮದನಿ ದರ್ಗಾ ಸಮಿತಿ ಇದರ ಆಶ್ರಯದಲ್ಲಿ ನಾರಾಯಣ ಗುರುವರ್ಯರ 167 ನೇ ಜನ್ಮದಿನಾಚರಣೆ ಅಂಗವಾಗಿ ಗುರು ಬೆಳದಿಂಗಳ ಪ್ರಾಯೋಜಕತ್ವದಲ್ಲಿ ಸಸಿ ನೆಡುವ ಕಾರ್ಯಕ್ರಮ ಉಳ್ಳಾಲ ದರ್ಗಾ ವಠಾರದಲ್ಲಿ ನಡೆಯಿತು. ಶಾಸಕ ಖಾದರ್ ಕಾರ್ಯಕ್ರಮ ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ಯನ್ನು ದರ್ಗಾ ಅಧ್ಯಕ್ಷ ಅಬ್ದುಲ್ ರಶೀದ್ ವಹಿಸಿದ್ದರು.
ಮುಖ್ಯ ಅತಿಥಿಯಾಗಿದ್ದ ರಾಜ್ಯ ಸಭಾ ಸದಸ್ಯ ನಾಸೀರ್ ಹುಸೇನ್, ಅಡ್ವಕೇಟ್ ಪದ್ಮರಾಜ್ ಮಾತನಾಡಿರು.
ದರ್ಗಾ ಉಪಾಧ್ಯಕ್ಷರಾದ ಯು.ಕೆ.ಮೋನು ಇಸ್ಮಾಯಿಲ್, ಬಾವ ಮೊಹಮ್ಮದ್, ಪ್ರದಾನ ಕಾರ್ಯದರ್ಶಿ ಮೊಹಮ್ಮದ್ ತ್ವಾಹ, ಜತೆ ಕಾರ್ಯ ದರ್ಶಿಗಳಾದ ನೌಷಾದ್ ಅಲಿ, ಕೋಶಾಧಿಕಾರಿ ಯು.ಕೆ.ಇಲ್ಯಾಸ್, ಲೆಕ್ಕ ಪರಿಶೋಧಕ ಯು.ಟಿ.ಇಲ್ಯಾಸ್, ಚಾರಿಟೇಬಲ್ ಟ್ರಸ್ಟ್ ಉಪಾಧ್ಯಕ್ಷರಾದ ಮುಸ್ತಫಾ ಅಬ್ದುಲ್ಲಾ, ಯು.ಕೆ.ಇಬ್ರಾಹಿಂ, ಜತೆಕಾರ್ಯದರ್ಶಿ ಎ.ಕೆ.ಮೊಯಿದ್ದೀನ್, ಕೋಶಾಧಿಕಾರಿ ಜೆ.ಅಬ್ದುಲ್ ಹಮೀದ್, ಅರೆಬಿಕ್ ಟ್ರಸ್ಟ್ ಉಪಾಧ್ಯಕ್ಷ ಅಬೂಬಕ್ಕರ್ ಕೋಟೆಪುರ, ಜತೆಕಾರ್ಯದರ್ಶಿ ಅಸಿಫ್ ಅಬ್ದುಲ್ಲಾ, ಸದಸ್ಯರಾದ ಫಾರೂಕ್ ಉಳ್ಳಾಲ್, ಅದ್ದಾಕ ಕೋಟೆಪುರ , ಯು.ಕೆ ಹಮ್ಮಬ್ಬ ಕೋಟೆಪುರ, ಹಸೈನಾರ್ ಬೊಟ್ಟು, ಅಬೂಬಕ್ಕರ್ ಅಲಿನಗರ, ಇಬ್ರಾಹೀಮ್ ಹಾಜಿ ಉಳ್ಳಾಲಬೈಲು, ಕೆ.ಎನ್ ಮಹ್ಮೂದ್ ಅಳೇಕಲ, ಮಯ್ಯದ್ದಿ ಕೋಡಿ, ಕಾದರ್ ಮುಸ್ಲಿಯಾರ್ ಅಕ್ಕರೆಕರೆ, ಯು.ಪಿ ಹಮೀದ್ ಅಳೇಕಲ, ಸಿ.ಮ್ ಹನೀಫ್ ಚೊಂಬುಗುಡ್ಡೆ, ಎನ್.ಕೆ ಅಹ್ಮದ್ ಅಳೇಕಲ, ಮೊಯ್ದಿನಬ್ಬ ಉಳ್ಳಾಲಬೈಲು, ಯು.ಟಿ ಇಲ್ಯಾಸ್ ಕಲ್ಲಾಪು, ಯು.ಕೆ ಹನೀಫ್ ಮಾರ್ಗತಲೆ, ಬಿ.ಎಸ್ ಹಾಶಿರ್ ಮದನಿ ನಗರ, ಮೊಹಮ್ಮದ್ ಕಲ್ಲಾಪು, ಹಸನಬ್ಬ ಕೈಕೊ, ಹನೀಫ್ ಸೋಲಾರ್ ಕೋಡಿ, ಫಾರೂಕ್ ಚೊಂಬುಗುಡ್ಡೆ, ಅಬ್ದುಲ್ ರಹ್ಮಾನ್ ದಾರಂದಬಾಗಿಲು, ಜಬ್ಬಾರ್ ಮೇಲಂಗಡಿ, ಯು.ಬಿ ಸಲೀಮ್ ಮೇಲಂಗಡಿ, ಅದ್ದಾಮ ಮೇಲಂಗಡಿ, ಕೆ.ಪಿ ನಝೀರ್,ಅಲಿ ಮೋನಾಕ, ಯು.ಎಮ್ ಅಹ್ಮದ್, ನಗರ ಸಭಾ ಅಧ್ಯಕ್ಷ ಚಿತ್ರ ಕಲಾ, ಉಪಾಧ್ಯಕ್ಷ ಅಯ್ಯೂಬ್ ಮಂಚಿಲ ಮತ್ತಿತ್ತರರು ಉಪಸ್ಥಿತರಿದ್ದರು.











