ಯುಎಸ್ ಓಪನ್: ಮಿಶ್ರ ಡಬಲ್ಸ್ ಮೊದಲ ಸುತ್ತಿನಲ್ಲೇ ಸಾನಿಯಾ ಔಟ್

ಫೈಲ್ ಫೋಟೊ (source: PTI)
ನ್ಯೂಯಾರ್ಕ್: ಯುಎಸ್ ಓಪನ್ ಟೆನಿಸ್ ಪಂದ್ಯಾವಳಿಯಲ್ಲಿ ಭಾರತದ ಖ್ಯಾತ ಟೆನಿಸ್ ತಾರೆ ಸಾನಿಯಾ ಮಿರ್ಝಾ ಎರಡನೇ ಆಘಾತ ಅನುಭವಿಸಿದ್ದಾರೆ.
ಮಹಿಳೆಯರ ಡಬಲ್ಸ್ನಲ್ಲಿ ಮೊದಲ ಸುತ್ತಿನಲ್ಲೇ ನಿರ್ಗಮಿಸಿದ್ದ ಸಾನಿಯಾ, ಮಿಶ್ರ ಡಬಲ್ಸ್ನಲ್ಲಿ ಅಮೆರಿಕದ ರಾಜೀವ್ ರಾಮ್ ಜತೆ ಕಣಕ್ಕೆ ಇಳಿದಿದ್ದರು. ಆದರೆ ಮೊದಲ ಸುತ್ತಿನ ಪಂದ್ಯದಲ್ಲಿ ಜೋಡಿ ಜರ್ಮನಿಯ ಕ್ವೆಟ್ಟಾ ಪಶೆಕ್ ಮತ್ತು ಕೆವಿನ್ ಕ್ರವೀಟ್ಸ್ ಜೋಡಿಯ ವಿರುದ್ಧ ಆಘಾತಕಾರಿ ಸೋಲು ಕಂಡು ನಿರ್ಗಮಿಸಿದೆ.
5ನೇ ಕೋರ್ಟ್ನಲ್ಲಿ ನಡೆದ ಪಂದ್ಯದಲ್ಲಿ ಸಾನಿಯಾ ಜೋಡಿ 6-3, 3-6, 7-10ರಿಂದ ಪರಾಭವಗೊಂಡಿತು.
Next Story