ಪ್ಯಾರಾಲಿಂಪಿಕ್ಸ್: ಶೂಟರ್ ಮನೀಶ್ ಗೆ ಚಿನ್ನ, ಸಿಂಗ್ ರಾಜ್ ಗೆ ಬೆಳ್ಳಿ

ಮನೀಶ್ ನರ್ವಾಲ್ ಹಾಗೂ ಸಿಂಗ್ ರಾಜ್, photo: twitter
ಟೋಕಿಯೊ: ಶೂಟರ್ ಮನೀಶ್ ನರ್ವಾಲ್ ಪ್ಯಾರಾಲಿಂಪಿಕ್ಸ್ ನಲ್ಲಿ ಭಾರತಕ್ಕೆ ಮೂರನೇ ಚಿನ್ನದ ಪದಕ ಗೆದ್ದುಕೊಟ್ಟಿದ್ದಾರೆ. ಇನ್ನೋರ್ವ ಶೂಟರ್ ಸಿಂಗ್ ರಾಜ್ ಅಧಾನ ಅವರು ಬೆಳ್ಳಿ ಪದಕ ಗೆದ್ದುಕೊಂಡರು. ಈ ಇಬ್ಬರು ಶನಿವಾರ ನಡೆದ ಪಿ4 ಮಿಕ್ಸೆಡ್ 50 ಮೀ. ಪಿಸ್ತೂಲ್ ಎಸ್ಎಚ್ 1 ಸ್ಪರ್ಧೆಯಲ್ಲಿ ಈ ಸಾಧನೆ ಮಾಡಿದ್ದಾರೆ.
19ರ ರ ಹರೆಯದ ನರ್ವಾಲ್ ಒಟ್ಟು 218.2 ಅಂಕ ಗಳಿಸಿ ಒಲಿಂಪಿಕ್ಸ್ ದಾಖಲೆ ನಿರ್ಮಿಸಿ ಚಿನ್ನ ಜಯಿಸಿದರು. ಮಂಗಳವಾರ ಕಂಚು ಗೆದ್ದಿದ್ದ ಅಧಾನ 216.7 ಅಂಕ ಗಳಿಸಿ ಬೆಳ್ಳಿ ಗೆದ್ದುಕೊಂಡರು.ರಶ್ಯದ ಸೆರ್ಗಿ ಮಲಿಶೆವ್ (196.8)ಕಂಚು ಜಯಿಸಿದರು.
ಇದಕ್ಕೂ ಮೊದಲು ಅಸಕಾ ಶೂಟಿಂಗ್ ರೇಂಜ್ ನಲ್ಲಿ ನಡೆದ ಅರ್ಹತಾ ಸುತ್ತಿನಲ್ಲಿ 4ನೇ ಸ್ಥಾನ ಪಡೆದಿದ್ದ ಅಧಾನ (536)ಪದಕ ಸುತ್ತಿಗೆ ತಲುಪಿದ್ದರು. ನರ್ವಾಲ್ (533)7ನೇ ಸ್ಥಾನದೊಂದಿಗೆ ಪದಕ ಸುತ್ತಿಗೇರಿದ್ದರು.
Next Story