ಪ್ಯಾರಾಲಿಂಪಿಕ್ಸ್ ಬ್ಯಾಡ್ಮಿಂಟನ್ :ಫೈನಲ್ ತಲುಪಿದ ಕೃಷ್ಣನಗರ್ , ಸುಹಾಸ್ ;ಕನಿಷ್ಠ ಬೆಳ್ಳಿ ಧೃಢ

photo: twitter
ಟೋಕಿಯೊ: ಟೋಕಿಯೊ ಪ್ಯಾರಾಲಿಂಪಿಕ್ಸ್ ನ ಪುರುಷರ ಸಿಂಗಲ್ಸ್(ಎಸ್ ಎಚ್ 6)ಫೈನಲ್ ಗೆ ತಲುಪುವ ಮೂಲಕ ಕೃಷ್ಣ ನಗರ್ ಭಾರತಕ್ಕೆ ಬ್ಯಾಡ್ಮಿಂಟನ್ ನಲ್ಲಿ ಮತ್ತೊಂದು ಪದಕ ಖಚಿತಪಡಿಸಿದರು.
ಶನಿವಾರ ನಡೆದ ಸೆಮಿ ಫೈನಲ್ ನಲ್ಲಿ ಕೃಷ್ಣನಗರ್ ಅವರು ಎದುರಾಳಿ ಗ್ರೇಟ್ ಬ್ರಿಟನ್ ನ ಕ್ರಿಸ್ಟಿನ್ ಕೂಂಬ್ಸ್ ಅವರನ್ನು 21-10, 21-11 ಗೇಮ್ ಗಳ ಅಂತರದಿಂದ ಮಣಿಸಿ ಕನಿಷ್ಠ ಬೆಳ್ಳಿ ಪದಕವನ್ನು ದೃಢಪಡಿಸಿದರು.
ನಗರ್ ರವಿವಾರ ಚಿನ್ನದ ಪದಕಕ್ಕಾಗಿ ನಡೆಯಲಿರುವ ಪಂದ್ಯದಲ್ಲಿ ಹಾಂಕಾಂಗ್ ನ ಚು ಮಾನ್ ಕೈ ಅವರನ್ನು ಎದುರಿಸಲಿದ್ದಾರೆ.
ಇದೇ ವೇಳೆ, ಶನಿವಾರ ನಡೆದ ತಮ್ಮ ಸಂಬಂಧಿತ ವಿಭಾಗಗಳಲ್ಲಿ ಭಾರತದ ಇತರ ಶಟ್ಲರ್ ಗಳಾದ ಸುಹಾಸ್ ಯಥಿರಾಜ್ ಹಾಗೂ ಪ್ರಮೋದ್ ಭಗತ್ ಅವರು ಫೈನಲ್ ಗೆ ತಲುಪಿದರು.
ಮೊದಲ ಸೆಮಿ ಫೈನಲ್ ನಲ್ಲಿ ಎಸ್ ಎಲ್ 4 ಕ್ಲಾಸ್ ವಿಭಾಗದಲ್ಲಿ ಸುಹಾಸ್ ಅವರು ಇಂಡೋನೇಶ್ಯದ ಫ್ರೆಡಿ ಸೆಟಿಯವಾನ್ ರನ್ನು 21-9, 21-15 ಗೇಮ್ ಗಳ ಅಂತರದಿಂದ ಮಣಿಸಿದರು. ನೊಯ್ಡಾದ ಜಿಲ್ಲಾ ಮ್ಯಾಜಿಸ್ಟ್ರೇಟ್ ಸುಹಾಸ್ ರವಿವಾರ ಫೈನಲ್ ನಲ್ಲಿ ಫ್ರಾನ್ಸಿನ ಲುಕಾಸ್ ಮಝುರ್ ಅವರನ್ನು ಎದುರಿಸಲಿದ್ದಾರೆ.