ಉಡುಪಿ: ವಾರಾಂತ್ಯ ಕರ್ಫ್ಯೂಗೆ ನೀರಸ ಪ್ರತಿಕ್ರಿಯೆ

ಉಡುಪಿ, ಸೆ.3: ಉಡುಪಿ ಜಿಲ್ಲಾದ್ಯಂತ ಇಂದಿನಿಂದ ಜಾರಿಗೊಳಿಸಿರುವ ವಾರಾಂತ್ಯ ಕರ್ಫ್ಯೂಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಕೆಲವೊಂದು ಅಂಗಡಿಗಳು ಮುಚ್ಚಿದ್ದು ಹೊರತುಪಡಿಸಿದರೆ, ಉಳಿದಂತೆ ಎಲ್ಲ ಚಟುವಟಿಕೆಗಳು ಸಾಮಾನ್ಯವಾಗಿರುವುದು ಕಂಡುಬಂತು. ಕೆಎಸ್ಸಾರ್ಟಿಸಿ, ಸರ್ವಿಸ್ ಬಸ್‌ಗಳು, ಟ್ಯಾಕ್ಸಿ, ಆಟೊ ರಿಕ್ಷಾಗಳ ಓಡಾಟ ಎಂದಿನಂತೆ ಇದ್ದವು. ತರಕಾರಿ, ದಿನಸಿ, ಪೆಟ್ರೋಲ್ ಬಂಕ್, ಹೂವು ಮಾರಾಟ, ಮೆಡಿಕಲ್, ಬೇಕರಿ ಹಾಗೂ ಇತರ ಕಚೇರಿಗಳು ತೆರೆದಿದ್ದವು. ನಗರ ಸೇರಿದಂತೆ ಜಿಲ್ಲೆಯ ಎಲ್ಲ ಕಡೆಗಳಲ್ಲಿಯೂ ಜನ ಸಂಚಾರ ಕೂಡ ಸಾಮಾನ್ಯವಾಗಿತ್ತು.
Next Story




.gif)
.gif)

