ಕರಾವಳಿಯಲ್ಲಿ ನಾಲ್ಕು ದಿನ ಭಾರೀ ಮಳೆಯ ಮುನ್ಸೂಚನೆ

ಉಡುಪಿ, ಸೆ.4: ಉಡುಪಿ ಸೇರಿದಂತೆ ಕರ್ನಾಟಕ ಕರಾವಳಿಯ ಮೂರು ಜಿಲ್ಲೆಗಳಲ್ಲಿ ಮುಂದಿನ ನಾಲ್ಕು ದಿನಗಳ ಕಾಲ ಸಾಧಾರಣದಿಂದ ಭಾರೀ ಮಳೆ ಸುರಿಯುವ ಕುರಿತು ಬೆಂಗಳೂರಿನ ಹವಾಮಾನ ಕೇಂದ್ರ ಮುನ್ಸೂಚನೆ ನೀಡಿದೆ.
ಉಡುಪಿ, ದಕ್ಷಿಣ ಕನ್ನಡ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ಸೆ.5ರಿಂದ 7ರವರೆಗೆ ಪ್ರತಿದಿನವೂ 124.5ಮಿ.ಮೀ.ಗಿಂತಲೂ ಅಧಿಕ ಮಳೆ ಸುರಿಯುವ ಸಾಧ್ಯತೆ ಇದೆ. ಅದೇ ರೀತಿ 8 ಮತ್ತು 9ರಂದು ಜಿಲ್ಲೆಯ ಕೆಲವು ಪ್ರದೇಶಗಳಲ್ಲಿ 64.5ಮಿ.ಮೀ. ಮಳೆ ಸುರಿಯಬಹುದು ಎಂದು ಹವಾಮಾನ ಮುನ್ಸೂಚನೆ ಯಲ್ಲಿ ಹೇಳಲಾಗಿದೆ.
ಹೆಬ್ರಿಯಲ್ಲಿ ಭಾರೀ ಮಳೆ: ಇಂದು ಬೆಳಗ್ಗೆ 8:30ಕ್ಕೆ ಮುಕ್ತಾಯಗೊಂಡಂತೆ ಹಿಂದಿನ 24 ಗಂಟೆಗಳಲ್ಲಿ ಉಡುಪಿ ಜಿಲ್ಲೆಯ ಹೆಬ್ರಿಯಲ್ಲಿ ಭಾರೀ ಮಳೆ ಸುರಿದಿದೆ. ಅಲ್ಲಿ 51ಮಿ.ಮೀ. ಮಳೆಯಾಗಿದೆ. ಇನ್ನು ಕುಂದಾಪುರದಲ್ಲಿ 30ಮಿ.ಮೀ, ಬೈಂದೂರಿನಲ್ಲಿ 21, ಬ್ರಹ್ಮಾವರದಲ್ಲಿ 18, ಉಡುಪಿಯಲ್ಲಿ 11, ಕಾರ್ಕಳದಲ್ಲಿ 10 ಹಾಗೂ ಕಾಪುವಿನಲ್ಲಿ 4ಮಿ.ಮೀ. ಮಳೆಯಾಗಿದೆ ಎಂದು ಜಿಲ್ಲಾದಿಕಾರಿ ಕಚೇರಿ ಮಾಹಿತಿ ತಿಳಿಸಿದೆ.
Next Story





