Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಅಂತಾರಾಷ್ಟ್ರೀಯ
  4. ಕಾಬೂಲ್ ನಲ್ಲಿ ತಾಲಿಬಾನ್ ಸೈನಿಕರಿಂದ...

ಕಾಬೂಲ್ ನಲ್ಲಿ ತಾಲಿಬಾನ್ ಸೈನಿಕರಿಂದ ಗುಂಡುಹಾರಾಟ: 17 ಬಲಿ

ವಾರ್ತಾಭಾರತಿವಾರ್ತಾಭಾರತಿ4 Sept 2021 10:33 PM IST
share

ಕಾಬೂಲ್,ಸೆ.4: ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್ ನಲ್ಲಿ ತಾಲಿಬಾನ್ ಯೋಧರು ಗಾಳಿಯಲ್ಲಿ ಗುಂಡುಹಾರಾಟ ನಡೆಸಿದ ಸಂದರ್ಭದಲ್ಲಿ ಆಕಸ್ಮಿಕವಾಗಿ ಗುಂಡು ತಗಲಿ 17 ಮಂದಿ ಮೃತಪಟ್ಟಿದ್ದು ಹಾಗೂ 41 ಮಂದಿ ಗಾಯಗೊಂಡಿದ್ದಾರೆಂದು ಟೋಲೊ ನ್ಯೂಸ್ ವರದಿ ಮಾಡಿದೆ.

ತಾಲಿಬಾನ್ ಹಾಗೂ ರಾಷ್ಟ್ರೀಯ ಪ್ರತಿರೋಧ ರಂಗ (ಎನ್ಆರ್ಎಫ್)ದ ಪಡೆಗಳ ನಡುವೆ ಘರ್ಷಣೆ ನಡೆಯುತ್ತಿರುವ ಪಂಜ್ಶೀರ್, ತಮ್ಮ ಕೈವಶವಾಗಿದೆಯೆಂಬ ದೃಢಪಡಿಸಲಾಗದ ವರದಿಗಳು ಪ್ರಕಟವಾದ ಬಳಿಕ ಕಾಬೂಲಿನಲ್ಲಿ ವಿಜಯೋತ್ಸವ ಆಚರಿಸಿದ ಕೆಲವು ತಾಲಿಬಾನ್ ಯೋಧರು ಗಾಳಿಯಲ್ಲಿ ಗುಂಡು ಹಾರಾಟ ನಡೆಸಿದ್ದರೆಂದು ಟೊಲೋ ನ್ಯೂಸ್ ವರದಿ ಮಾಡಿದೆ.

ಕೆಲವು ಮಾಧ್ಯಮ ವರದಿಗಳ ಪ್ರಕಾರ ಪಂಜ್ಶೀರ್ ಪ್ರಾಂತದಲ್ಲಿ ನಡೆಯುತ್ತಿರುವ ಭೀಕರ ಕಾಳಗದಲ್ಲಿ ಇತ್ತಂಡಗಳ 300ಕ್ಕೂ ಅಧಿಕ ಮಂದಿ ಯೋಧರು ಸಾವನ್ನಪ್ಪಿದ್ದಾರೆ. ಪಂಜ್ಶೀರ್ ಪ್ರಾಂತವು ತಮ್ಮ ವಶವಾಗಿದೆಯೆಂಬುದನ್ನು ತಾಲಿಬಾನ್ ವರದಿಯನ್ನು ಉತ್ತರ ಪ್ರಾಂತ ಪ್ರತಿರೋಧ ರಂಗವು (ನಾರ್ದರ್ನ್ ರೆಸಿಸ್ಟಾನ್ಸ್ ಫ್ರಂಟ್) ತಳ್ಳಿಹಾಕಿದೆ. ‘‘ಪಂಜ್ಶೀರ್ ತಾಲಿಬಾನ್ನ ವಶವಾಗಿದೆಯೆಂಬ ವರದಿಗಳು ಪಾಕಿಸ್ತಾನಿ ಮಾಧ್ಯಮಗಳಲ್ಲಿ ಹರಡುತ್ತಿವೆ. ಆದರೆ ಅದು ಸುಳ್ಳಾಗಿದೆ’’ ಎಂದು ಬಂಡುಕೋರ ಪಡೆಗಳನ್ನು ಮುನ್ನಡೆಸುತ್ತಿರುವ ಎನ್ಆರ್ಎಫ್ ವರಿಷ್ಠ ಅಹ್ಮದ್ ಮಸೂದ್ ಹೇಳಿದ್ದಾರೆ.


 ತಾಲಿಬಾನ್ ಸರಕಾರದ ರಚನೆ ಇನ್ನೂ ಒಂದು ವಾರ ಮುಂದೂಡಿಕೆ

 ಅಫ್ಘಾನಿಸ್ತಾನದಲ್ಲಿ ನೂತನ ತಾಲಿಬಾನ್ ಸರಕಾರದ ರಚನೆಯನ್ನು ಒಂದು ವಾರ ಮುಂದೂಡಿರುವುದಾಗಿ ವಕ್ತಾರ ಝಬಿಯುಲ್ಲಾ ಮುಜಾಹಿದ್ ಶನಿವಾರ ತಿಳಿಸಿದ್ದಾರೆ. 

ಅಂತಾರಾಷ್ಟ್ರೀಯ ಸಮುದಾಯಕ್ಕೆ ಸ್ವೀಕಾರಾರ್ಹವಾದ ವಿಶಾಲ ತಳಹದಿಯ ಹಾಗೂ ಎಲ್ಲರನ್ನೂ ಒಳಗೊಂಡ ಆಡಳಿತಕ್ಕೆ ರೂಪುರೇಷೆ ನೀಡಲು ತಾಲಿಬಾನ್ ಪ್ರಯತ್ನಿಸುತ್ತಿರುವ ನಡುವೆಯೇ ಅದು ಈ ಹೇಳಿಕೆ ನೀಡಿದೆ. ಈ ಮೊದಲು ನೂತನ ಸರಕಾರದ ರಚನೆಯನ್ನು ತಾಲಿಬಾನ್ ನಾಯಕರು ಶನಿವಾರ ಘೋಷಿಸಲಿದ್ದಾರೆಂದು ನಿರೀಕ್ಷಿಸಲಾಗಿತ್ತು. ತಾಲಿಬಾನ್ ಸಹಸಂಸ್ಥಾಪಕ ಮುಲ್ಲಾ ಅಬ್ದುಲ್ ಘನಿ ಬರಾದಾರ್ ನೇತೃತ್ವದಲ್ಲಿ ನೂತನ ತಾಲಿಬಾನ್ ಸರಕಾರ ನೇಮಕವಾಗುವ ನಿರೀಕ್ಷೆಯಿದೆ.

 ನೂತನ ಸರಕಾರ ಹಾಗೂ ಸಂಪುಟ ಸದಸ್ಯರ ಬಗ್ಗೆ ಮುಂದಿನ ವಾರ ತಾಲಿಬಾನ್ ಘೋಷಣೆಯೊಂದನ್ನು ಹೊರಡಿಸಲಿದೆ ಎಂದು ಮುಜಾಹಿದ್ ಅವರು ಯಾವುದೇ ವಿವರಗಳನ್ನು ನೀಡದೆ ತಿಳಿಸಿದ್ದಾರೆ.

 ಜಗತ್ತಿಗೆ ಸಮ್ಮತಾರ್ಹವಾದ ವಿಶಾಲ ತಳಹದಿಯ ಸರಕಾರವನು ರಚಿಸಲು ತಾಲಿಬಾನ್ ಯತ್ನಿಸುತ್ತಿರುವುದೇ ವಿಳಂಬಕ್ಕೆ ಕಾರಣವಾಗಿದೆಯೆಂದು ನೂತನ ಸರಕಾರದ ರಚನೆಗೆ ಸಂಬಂಧಿಸಿ ವಿವಿಧ ಬಂಡುಕೋರ ಗುಂಪುಗಳ ನಡುವೆ ಮಾತುಕತೆಗಾಗಿ ತಾಲಿಬಾನ್ ರಚಿಸಿರುವ ಸಮಿತಿಯ ಸದಸ್ಯರಾಗಿರುವ ಖಲೀಲ್ ಹಕ್ಕಾನಿ ತಿಳಿಸಿದ್ದಾರೆ.

 ತಾಲಿಬಾನ್ ಮಾತ್ರವೇ ಒಳಗೊಂಡಂತಹ ಸರಕಾರವು ವಿಶ್ವಸಮುದಾಯಕ್ಕೆ ಸಮ್ಮತಾರ್ಹವಾಗದು ಎಂಬುದನ್ನು ಒಪ್ಪಿಕೊಂಡ ಅವರು ‘ತಾಲಿಬಾನ್ ಸ್ವಸಾಮರ್ಥ್ಯದಿಂದ ಸರಕಾರ ರಚಿಸಬಹುದಾಗಿದೆ. ಆದರೆ ಎಲ್ಲಾ ಪಕ್ಷಗಳು, ಸಮಾಜದ ಗುಂಪುಗಳಿಗೆ ಸಮರ್ಪಕ ಪ್ರಾತಿನಿಧ್ಯ ನೀಡುವ ಬಗ್ಗೆ ಅದು ಗಮನಹರಿಸುತ್ತಿದೆ ’ಎಂದರು.

  ತಾಲಿಬಾನ್ ಗೆ ಬೆಂಬಲ ಘೋಷಿಸಿರುವ ಅಫ್ಘಾನಿಸ್ತಾನದ ಮಾಜಿ ಪ್ರಧಾನಿ ಹಾಗೂ ಜಮೀಯತ್ ಎ ಇಸ್ಲಾಮಿ ಅಫ್ಘಾನಿಸ್ತಾನ ಗುಂಪಿನ ವರಿಷ್ಠ ಗುಲಾಬುದ್ದೀನ್ ಹೆಕ್ಮತ್ಯಾರ್ ಹಾಗೂ ಅಫ್ಘಾನಿಸ್ತಾನದ ಮಾಜಿ ಅಧ್ಯಕ್ಷರ ಸಹೋದರ ಅಶ್ರಫ್ ಘನಿ ಅವರಿಗೆ ಸಂಪುಟದಲ್ಲಿ ಪ್ರಾತಿನಿಧ್ಯ ನೀಡಲಾಗುವುದು ಎಂದು ಖಲೀಲ್ ಹಕ್ಕಾನಿ ತಿಳಿಸಿದ್ದಾರೆ.

  ತಮ್ಮ ಸರಕಾರಕ್ಕೆ ಬೆಂಬಲವನ್ನು ಪಡೆದುಕೊಳ್ಳಲು ತಾಲಿಬಾನ್, ಅಫ್ಘಾನಿಸ್ತಾನದ ಇತರ ಗುಂಪುಗಳ ಜೊತೆಗೂ ಮಾತುಕತೆ ಪ್ರಕ್ರಿಯೆಯನ್ನು ನಡೆಸಲಿದೆಯೆಂದು ಅವರು ತಿಳಿಸಿದ್ದಾರೆ. ಇದಕ್ಕೂ ಮೊದಲು ಕತರ್ ರಾಜಧಾನಿ ದೋಹಾದಲ್ಲಿರುವ ತಾಲಿಬಾನ್ನ ರಾಜಕೀಯ ಕಾರ್ಯಾಲಯದ ಅಧ್ಯಕ್ಷ ಬರದಾರ್ ಅವರು ಕಾಬೂಲ್ನಲ್ಲಿ ತಾಲಿಬಾನ್ ಸರಕಾರದ ನೇತೃತ್ವ ವಹಿಸುವ ಸಾಧ್ಯತೆಯಿದೆಂದು ಮೂಲಗಳು ವರದಿ ಮಾಡಿದ್ದವು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X