ಮಂಗಳೂರು: ಟೀಂ ಬಿ-ಹ್ಯೂಮನ್‌ನಿಂದ ಕೊರೋನ ಲಸಿಕಾ ಶಿಬಿರ

ಮಂಗಳೂರು, ಸೆ.4: ಟೀಮ್ ಬಿ-ಹ್ಯೂಮನ್ ಮಂಗಳೂರು ವತಿಯಿಂದ ಜಮೀಯ್ಯತುಲ್ ಫಲಾಹ್ ಮಂಗಳೂರು, ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ಹಾಗೂ ಟೀಂ ಮೇಕ್-ಎ-ಚೇಂಜ್ ಇದರ ಸಹಭಾಗಿತ್ವದಲ್ಲಿ ಉಚಿತ ಕೊರೋನ ಲಸಿಕಾ ಶಿಬಿರವು ಕಂಕನಾಡಿಯ ಜಮೀಯ್ಯತುಲ್ ಫಲಾಹ್ ಸಭಾಂಗಣದಲ್ಲಿ ಶನಿವಾರ ಯಶಸ್ವಿಯಾಗಿ ನೆರವೇರಿತು.
ಲಸಿಕಾ ಶಿಬಿರದಲ್ಲಿ ಸುಮಾರು 660 ಜನಸಾಮಾನ್ಯರು, ರಿಕ್ಷಾ ಚಾಲಕರು, ಟ್ಯಾಕ್ಸಿ ಚಾಲಕರು, ಕೂಲಿ ಕಾರ್ಮಿಕರು ಹಾಗೂ ಇತರ ಶ್ರಮಿಕ ವರ್ಗದವರು ಪ್ರಥಮ ಮತ್ತು ಕೆಲವರು ದ್ವಿತೀಯ ಡೋಸ್ ಲಸಿಕೆಯನ್ನು ಪಡೆದರು. ಈ ಸಂದರ್ಭದಲ್ಲಿ ಕೆಲವು ಹಿರಿಯ ರೋಗಿಗಳು ಶಿಬಿರದ ಸ್ವಯಂಸೇವಕರ ವಾಹನದ ಮೂಲಕ ಆಗಮಿಸಿ ಲಸಿಕೆ ಪಡೆದರು.
ಮಂಗಳೂರು ನಗರದಾದ್ಯಂತ ಇಂತಹ ಹಲವು ಉಚಿತ ಲಸಿಕ ಶಿಬಿರಗಳನ್ನು ಏರ್ಪಡಿಸಲು ಜನಪ್ರತಿನಿಧಿಗಳು, ಅಧಿಕಾರಿಗಳು ಅನುವು ಮಾಡಿಕೊಡುವಂತೆ ಆಸಿಫ್ ಡೀಲ್ಸ್ ಮನವಿ ಮಾಡಿಕೊಂಡಿದ್ದಾರೆ.
ಕೊರೋನ ಅಲೆಯು ತೀವ್ರವಾಗಿ ವ್ಯಾಪಿಸಿದ ದಿನಗಳಿಂದಲೂ ನಿರಂತರವಾಗಿ ಈ ರೀತಿಯ ಉಚಿತ ಲಸಿಕಾ ಶಿಬಿರ, ರಕ್ತದಾನ ಶಿಬಿರ, ರೋಗಿಗಳಿಗೆ ಉಪಯುಕ್ತ ಮಾಹಿತಿ ಶಿಬಿರ, ವಿವಿಧ ಧಾರ್ಮಿಕ ಕ್ಷೇತ್ರಗಳ ಸ್ಯಾನಿಟೈಸೇಶನ್ ಕಾರ್ಯಗಳನ್ನು ಟೀಂ ಬಿ-ಹ್ಯೂಮನ್ ತಂಡವು ಅತ್ಯಂತ ಯಶಸ್ವಿಯಾಗಿ ನಡೆಸುತ್ತಾ ಬಂದಿದೆ ಎಂದು ಆಸಿಫ್ ಡೀಲ್ಸ್ ತಿಳಿಸಿದ್ದಾರೆ.
ಕಾರ್ಯಕ್ರಮದಲ್ಲಿ ಟೀಂ ಬಿ-ಹ್ಯೂಮನ್‌ನ ತಮೀಂ, ಇರ್ಷಾದ್ ಕಂದಕ್, ನಜ್ಜಿ ಕಂದಕ್, ದಾವೂದ್, ಅಹ್ನಾಫ್ ಡೀಲ್ಸ್, ಮುಫ್ತಿ, ಅದ್ನಾನ್, ದೃವ್, ಉದಯ್, ಸಾದಿಕ್, ತೌಸಿಫ್, ಇಮ್ರಾನ್, ಮಣಿಕಂಟ ಮುಂತಾದವರು ಸ್ವಯಂಸೇವಕರಾಗಿ ಕಾರ್ಯನಿರ್ವಹಿಸಿದರು. ಹಾಗೆಯೇ ಟೀಂ ಮೇಕ್-ಎ-ಚೇಂಜ್‌ನ ಸುಹೈಲ್ ಕಂದಕ್, ಅಫ್ರೀದ್, ಮಿಶಾಬ್, ರಿಹಾನ್, ನಿಯಾನ್, ಶಕೀಲ್, ರೆಡ್‌ಕ್ರಾಸ್‌ನ ಪ್ರವೀಣ್ ಮತ್ತವರ ತಂಡವು ಈ ಕಾರ್ಯಕ್ರಮದ ಯಶಸ್ವಿಗೆ ಸಹಕಾರ ನೀಡಿದರು.








.jpeg)
.jpeg)

.jpeg)
.jpeg)

.jpeg)
.jpeg)

.jpeg)

.jpeg)
.jpeg)


