ರಾಷ್ಟ್ರಮಟ್ಟದ ಚಿತ್ರಕಲಾ ಸ್ಫರ್ಧೆಯಲ್ಲಿ ಆಳ್ವಾಸ್ ಕಾಲೇಜಿನ ಚೇತನ್ ಕುಮಾರ್ ಹಳ್ಳಿಹೊಳೆಗೆ ಪ್ರಥಮ ಪ್ರಶಸ್ತಿ

ಮಂಗಳೂರು : ಚಂದ್ರ ಫೌಂಡೇಶನ್, ಚಂಡೀಗಢ ಆಯೋಜಿಸಿದ್ದ ರಾಷ್ಟ್ರಮಟ್ಟದ ಚಿತ್ರಕಲಾ ಸ್ಫರ್ಧೆಯಲ್ಲಿ ಚೇತನ್ ಕುಮಾರ್ ಹಳ್ಳಿಹೊಳೆ ಪ್ರಥಮ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಇವರು ಮೂಡುಬಿದಿರೆಯ ಆಳ್ವಾಸ್ ವಿದ್ಯಾಸಂಸ್ಥೆಯ ವಿದ್ಯಾರ್ಥಿಯಾಗಿದ್ದಾರೆ.
ಹಳ್ಳಿಹೊಳೆಯ ಚಂದ್ರಶೇಖರ್ ನಾಯಕ್ ಮತ್ತು ರತ್ನಾ ದಂಪತಿಗಳ ಪುತ್ರರಾಗಿರುವ ಇವರು, ಲಾಕ್ ಡೌನ್ ಸಂದರ್ಭಗಳಲ್ಲಿ ಹಲವು ಅನುಪಯುಕ್ತ ವಸ್ತುಗಳನ್ನು ಬಳಸಿ ಕಲಾಕೃತಿಗಳನ್ನು ತಯಾರಿಸಿ ಪ್ರಶಂಸೆಗೆ ಪಾತ್ರರಾಗಿದ್ದರು. ಚೇತನ್ ಕುಮಾರ್ ಸದ್ಯ ಆಳ್ವಾಸ್ ಕಾಲೇಜಿನ ದೃಶ್ಯ ಕಲಾ ವಿಭಾಗದ ಅಂತಿಮ ವರ್ಷದ ಬಿ.ವಿ.ಎ ಪದವಿ ವ್ಯಾಸಂಗ ನಡೆಸುತ್ತಿದ್ದು, ಪ್ರಾಧ್ಯಾಪಕರಾದ ಅಹ್ಮದ್ ಮಿಕ್ದಾದ್ ರಿಂದ ತರಬೇತಿ ಪಡೆಯುತ್ತಿದ್ದಾರೆ.
Next Story





