ಅಂಪೈರ್ ನಿರ್ಧಾರಕ್ಕೆ ಅಸಮಾಧಾನ: ಕೆಎಲ್ ರಾಹುಲ್ ಗೆ ಐಸಿಸಿ ದಂಡ

ಕೆಎಲ್ ರಾಹುಲ್ (Photo: PTI)
ಲಂಡನ್: ಓವಲ್ ನಲ್ಲಿ ಇಂಗ್ಲೆಂಡ್ ವಿರುದ್ಧದ 4 ನೇ ಟೆಸ್ಟ್ ಪಂದ್ಯದ ಎರಡನೇ ಇನ್ನಿಂಗ್ಸ್ ನಲ್ಲಿ ಅಂಪೈರ್ ನೀಡಿದ್ದ ನಿರ್ಧಾರಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದ ಭಾರತದ ಆರಂಭಿಕ ಬ್ಯಾಟ್ಸ್ ಮನ್ ಐಸಿಸಿಯ ನೀತಿ ಸಂಹಿತೆ ಉಲ್ಲಂಘಿಸಿದ ಆರೋಪದಲ್ಲಿ ಪಂದ್ಯ ಶುಲ್ಕದ ಶೇಕಡಾ 15 ರಷ್ಟು ದಂಡ ವಿಧಿಸಲಾಗಿದೆ ಎಂದು ಅಂತರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ರವಿವಾರ ತಿಳಿಸಿದೆ.
ಶನಿವಾರದ ಮೊದಲ ಸೆಷನ್ ನಲ್ಲಿ ರಾಹುಲ್ 46 ರನ್ ಗಳಿಸಿ ಬ್ಯಾಟಿಂಗ್ ಮಾಡುತ್ತಿದ್ದಾಗ ಜೇಮ್ಸ್ ಆಂಡರ್ಸನ್ ಅವರ ಬೌಲಿಂಗ್ ನಲ್ಲಿ ಜಾನಿ ಬೈರ್ಸ್ಟೊಗೆ ಕ್ಯಾಚ್ ನೀಡಿದ್ದರು. ಅಂಪೈರ್ ಆರಂಭದಲ್ಲಿ ನಾಟೌಟ್ ತೀರ್ಪು ನೀಡಿದ್ದರು. ಆದರೆ ಇಂಗ್ಲೆಂಡ್ ಈ ತೀರ್ಪನ್ನು ಪುನರ್ ಪರಿಶೀಲಿಸಿತು . ನಂತರ ಅಂಪೈರ್ನ ಮೂಲ ನಿರ್ಧಾರವನ್ನು ರದ್ದುಗೊಳಿಸಲಾಯಿತು.
ರಾಹುಲ್ ಪೆವಿಲಿಯನ್ ಗೆ ಈ ನಿರ್ಧಾರಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದರು.
Next Story