ಕೋವಿಡ್‍ನಲ್ಲಿ ಬಾಲ್ಯ ವಿವಾಹ ಹೆಚ್ಚಳ: ಸಚಿವ ಹಾಲಪ್ಪ ಆಚಾರ್

ಕೊಪ್ಪಳ, ಸೆ. 5: ಕೋವಿಡ್ ಸಂದರ್ಭದಲ್ಲಿ ದೇಶದೆಲ್ಲೆಡೆ ಬಾಲ್ಯವಿಹಾಹ ಪ್ರಕರಣಗಳು ಹೆಚ್ಚಾಗಿದೆ ಎಂದು ಮಹಿಳಾ ಹಾಗೂ ಮಕ್ಕಳ ಕಲ್ಯಾಣ ಸಚಿವ ಹಾಲಪ್ಪ ಆಚಾರ್ ಹೇಳಿದ್ದಾರೆ.
ರವಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಯಾದಗಿರಿ ಹಾಗೂ ದಕ್ಷಿಣ ಕರ್ನಾಟಕದ ಒಂದು ಜಿಲ್ಲೆಯಲ್ಲಿ ಬಾಲ್ಯ ವಿವಾಹ ಹೆಚ್ಚಾಗುತ್ತಿದೆ. ಅದನ್ನು ಹೊರತುಪಡಿಸಿದರೆ ಬೇರೆ ಕಡೆ ಬಾಲ್ಯವಿವಾಹ ಕಡಿಮೆಯಾಗಿದೆ. ಹೀಗಾಗಿ, ಈ ಎರಡು ಜಿಲ್ಲೆಯಲ್ಲಿ ಜಾಗೃತಿ ಸೇರಿದಂತೆ ಇನ್ನಿತರೆ ನಾವು ಹೆಚ್ಚಿಗೆ ಕೆಲಸ ಮಾಡಬೇಕಿದೆ ಎಂದರು.
ಅಲ್ಲದೆ, ಜನ ಜಾಗೃತಿ ಎಲ್ಲಿವರೆಗೂ ನಾವು ಮಾಡಲ್ಲ. ಅಲ್ಲಿ ಯವರೆಗೆ ಮೌಢ್ಯ ಹೋಗಲ್ಲ ಎಂದ ಅವರು, ಇಲ್ಲಿನ ರೋಣ ಪೆÇಲೀಸ್ ಠಾಣಾ ವ್ಯಾಪ್ತಿಯ 16 ವರ್ಷದ ಬಾಲಕಿಯನ್ನು ಯಲಬುರ್ಗಾ ತಾಲೂಕಿನ ಗ್ರಾಮದ 39 ವರ್ಷದ ವ್ಯಕ್ತಿಗೆ ಮದುವೆ ಮಾಡಿಕೊಡಲಾಗಿತ್ತು. ಮದುವೆ ಮಾಡಿದ ನಂತರ ಗಂಡನ ಮನೆಯಲ್ಲಿ ಇರುವ ಬಾಲಕಿಯ ಬಗ್ಗೆ ಮಾಹಿತಿ ನೀಡಲಾಗಿತ್ತು. ಈ ಕುರಿತು ವರದಿ ಪಡೆಯಲಾಗುವುದು ಎಂದು ತಿಳಿಸಿದರು.
Next Story





