ಶಿಕ್ಷಕರ ದಿನಾಚರಣೆ: ಉಡುಪಿ ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪ್ರದಾನ
![ಶಿಕ್ಷಕರ ದಿನಾಚರಣೆ: ಉಡುಪಿ ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪ್ರದಾನ ಶಿಕ್ಷಕರ ದಿನಾಚರಣೆ: ಉಡುಪಿ ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪ್ರದಾನ](https://www.varthabharati.in/sites/default/files/images/articles/2021/09/6/305543-1630941455.jpg)
ಉಡುಪಿ, ಸೆ.6: ಅಲ್ ಇಂಡಿಯಾ ಐಡಿಯಲ್ ಟೀಚರ್ಸ್ ಅಸೋಸಿ ಯೇಷನ್ ವತಿಯಿಂದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮವನ್ನು ಸೋಮವಾರ ಉಡುಪಿಯ ಮುಸ್ಲಿಮ್ ವೆಲ್ಫೇರ್ ಅಸೋಸಿಯೇಶನ್ ಕಚೇರಿಯಲ್ಲಿ ಹಮ್ಮಿ ಕೊಳ್ಳಲಾಗಿತ್ತು.
ಈ ಸಂದರ್ಭದಲ್ಲಿ ಜಿಲ್ಲೆಯ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಯನ್ನು ಮಲ್ಪೆ ಫ್ಲವರ್ಸ್ ಆಫ್ ಪ್ಯಾರಡೈಸ್ ಶಾಲೆಯ ಶಿಕ್ಷಕಿ ಶಬಾನ ಮತ್ತು ಮೂಳೂರು ಅಲ್ ಇಹ್ಸಾನ್ ಶಿಕ್ಷಣ ಸಂಸ್ಥೆಯ ಶಿಕ್ಷಕ ಕಲಂದರ್ ಶಾಫಿ ಕೆ. ಅವರಿಗೆ ಪ್ರದಾನ ಮಾಡಲಾಯಿತು. ಪ್ರತಿಭಾನ್ವಿತ ವಿದ್ಯಾರ್ಥಿಗಳಾದ ಎಸ್.ನಿಮ್ರಾ ಶಿಫಾ, ಲತೀಫ ರಫಾ ಮತ್ತು ಸುಮಯ್ಯ ಅಶ್ರಫ್ರನ್ನು ಸನ್ಮಾನಿಸಲಾಯಿತು.
ಪ್ರೊ.ಅಬ್ದುಲ್ ಅಝೀಝ್ ಶೈಕ್ಷಣಿಕ ರಂಗದಲ್ಲಿ ಶಿಕ್ಷಕರು ವಹಿಸಬೇಕಾದ ಪಾತ್ರದ ಕುರಿತು ವಿವರಿಸಿದರು. ಐಟಾದ ರಾಜ್ಯಾಧ್ಯಕ್ಷ ರಝಾ ಮಾನ್ವಿ, ನಿಸಾರ್ ಉಡುಪಿ, ಐಟಾ ಜಿಲ್ಲಾಧ್ಯಕ್ಷ ಅಸ್ಲಮ್ ಹೈಕಾಡಿ ಮಾತನಾಡಿದರು. ಸಿದ್ಧೀಕ್ ಬಾಪ, ಸುರಯ್ಯಿ ಮುನೀರ್, ಶೈಲಾ ಹನೀಫ್ ಉಪಸ್ಥಿತರಿದ್ದರು. ಸಮೀನಾ ನಝೀರ್ ಕಾರ್ಯಕ್ರಮ ನಿರೂಪಿಸಿದರು. ಸುರಯ್ಯಿ ಮುನೀರ್ ವಂದಿಸಿದರು.
Next Story