ವಿದ್ಯಾರ್ಥಿನಿ ನಾಪತ್ತೆ
ಮಂಗಳೂರು, ಸೆ.6: ನಗರದ ಬಾಡಿಗೆ ಮನೆಯೊಂದರಲ್ಲಿದ್ದ ವಿದ್ಯಾರ್ಥಿನಿ ನಾಪತ್ತೆಯಾಗಿರುವ ಬಗ್ಗೆ ಕದ್ರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಬಾಗಲಕೋಟೆ ಜಿಲ್ಲೆಯ ಬದಾಮಿ ತಾಲೂಕಿನ ಕೋಟೆಕಲ್ ಗ್ರಾಮದ ಸುಮಿತಾ (19) ನಾಪತ್ತೆಯಾದ ವಿದ್ಯಾರ್ಥಿನಿ.
ಈಕೆ ಪೋಷಕರ ಜತೆ ಬಲ್ಮಠದ ವಾಸ್‌ಲೇನ್ 1ನೇ ಕ್ರಾಸ್ ಬಳಿ ವಾಸಿಸುತ್ತಿದ್ದು, ನಗರದ ಮಹಿಳಾ ಕಾಲೇಜಿನಲ್ಲಿ 2ನೇ ವರ್ಷದ ಬಿ.ಎ. ವಿದ್ಯಾಭ್ಯಾಸ ಮಾಡುತ್ತಿದ್ದರು. ಕಾಲೇಜು ಇಲ್ಲದ ಕಾರಣ ಸ್ವಂತ ಊರಾದ ಬದಾಮಿಯ ಕೋಟೆಕಲ್ಗೆ ಸೆ.4ರಂದು ಹೋದವಳು ಊರಿನ ಮನೆಗೂ ಹೋಗದೆ, ನಗರದ ಬಾಡಿಗೆ ಮನೆಗೂ ವಾಪಸಾಗದೆ ನಾಪತ್ತೆಯಾಗಿದ್ದಾಳೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಈ ಬಗ್ಗೆ ಮಂಗಳೂರು ಪೂರ್ವ (ಕದ್ರಿ) ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





